ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ(Kolkata): ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೆಭಾಂಶು ಪಾಂಡಾ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬರೋಬ್ಬರಿ 1,09,021 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇವರ ಸಮೀಪದ ಸ್ಪರ್ಧಿ ಸಿಪಿಐ(ಎಂ)ನ ಶಂಭುನಾಥ್ ಕುರ್ಮಿ 40,645 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ಸಿನ ರಜಾಕ್ ಮೊಲ್ಲಾ 10,084 ಮತಗಳನ್ನು ಪಡೆದಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಎರಡು ಹಂತದಲ್ಲಿ ನಡೆದಿತ್ತು. ಏಪ್ರಿಲ್ 23ರಂದು 152 ಕ್ಷೇತ್ರಗಳಿಗೆ, ಏಪ್ರಿಲ್ 29ರಂದು 142 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಆದರೆ, ಫಾಲ್ಟಾ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಹೀಗಾಗಿ ಮೇ 21ರಂದು ಮರು ಮತದಾನ ನಡೆಸಲಾಗಿತ್ತು. 294 ಸದಸ್ಯ ಬಲದಲ್ಲಿ ಈಗ ಬಿಜೆಪಿ ಸಂಖ್ಯೆ 208 ಆಗಿದೆ. ಸತತ ಮೂರು ಬಾರಿ ಅಧಿಕಾರ ರಚನೆ ಮಾಡಿದ್ದ ಮಮತಾ ಬ್ಯಾನರ್ಜಿಯ ಟಿಎಂಸಿ ಈ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಿದೆ.



