LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯ ಸರ್ಕಾರದಲ್ಲಿ ದಲಿತರಿಗೆ ರಕ್ಷಣೆ ಇಲ್ಲ: ಬಿಜೆಪಿ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ಅಧಿಕಾರಿಗಳ ಅನುಮಾನಸ್ಪದ ಸಾವು ಪ್ರಕರಣ ಸಂಬಂಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ದಲಿತ(Dalita) ವಿರೋಧಿ ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ರಕ್ಷಣೆ ಕೊಡುವುದಿಲ್ಲ. ದಲಿತರನ್ನು ಉಳಿಸುವುದಿಲ್ಲ ಎನ್ನುವುದನ್ನು ಪದೆಪದೆ ಸಾಬೀತುಪಡಿಸುತ್ತಲೇ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಲಾಗಿದೆ.

ವಾಲ್ಮೀಕಿ ನಿಗಮ(Valmiki Nigama) ಹಗರಣಕ್ಕೆ ದಲಿತ ಅಧಿಕಾರಿ ಅಕೌಂಟೆಂಟ್ ಚಂದ್ರಶೇಖರ್ ಅವರನ್ನು ಕಾಂಗ್ರೆಸ್ ಬಲಿ ಪಡೆದುಕೊಂಡಿತು. ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆಗೆ ಪಿಎಸ್ಐ(PSI) ಪರಶುರಾಮ್ ಅವರನ್ನು ಬಲಿ ಪಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಗೃಹ ಸಚಿವ ಪರಮೇಶ್ವರ್ ಅವರೇ ನಿಮ್ಮದೆ ಸಮುದಾಯದವರು ಈ ರೀತಿ ಸರ್ಕಾರದ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ನಿಮ್ಮ ಕರುಳು ಚೂರ್ ಎನ್ನುವುದಿಲ್ಲವೇ? ಮಾನವೀಯತೆಯನ್ನೇ ಮರೆತು ಬಿಟ್ಟಿದ್ದೀರಾ? ನೈತಿಕ ಹೊಣೆ ಹೊತ್ತು ರಾಜೀನಾಮೆ ಬಿಸಾಕಿ. ಜೊತೆಗೆ ಭ್ರಷ್ಟ ಮುಖ್ಯಮಂತ್ರಿಯನ್ನು ಕುರ್ಚಿಯಿಂದ ಕಳೆಗೆ ಇಳಿಸಿ ದಲಿತರ ಬೆನ್ನಿಗೆ ನಿಲ್ಲುತ್ತೀರಾ ಎಂದು ಸಮುದಾಯ ಕಾಯುತ್ತಿದೆ ಅಂತಾ ಕಿಡಿ ಕಾರಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST