ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಕೆಲ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಇದನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಂಡಿದೆ. ಈ ಬಗ್ಗೆ ಮಾತನಾಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ, ಅಡ್ಡ ಮತದಾನ ಮಾಡಿದವರು ಪಕ್ಷಕ್ಕೆ ಮೋಸ ಮಾಡಿದ್ದಾರೆ. ಇದು ಕ್ಷಮಿಸುವಂತದಲ್ಲ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುತ್ತಿದೆ. ಇದಾದ ಬಳಿಕ ಬಿ.ಎಲ್ ಸಂತೋಷ್ ಅವರನ್ನು ಭೇಟಿಯಾಗುತ್ತೇನೆ. ಹೈಕಮಾಂಡ್ ನಿರ್ಧಾರ ಪಾಲಿಸುತ್ತೇನೆ ಎಂದಿದ್ದಾರೆ. ಶಾಸಕಾಂಗ ಸಭೆಯನ್ನು ಧರ್ಮಸ್ಥಳದಲ್ಲಿ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಈ ಮೊದಲು ನಿರ್ಧರಿಸಿದ್ದರು. ಆಣೆ ಪ್ರಮಾಣಕ್ಕೂ ಮುಂದಾಗಿದ್ದರು.
ಇದಕ್ಕೆ ಅನೇಕ ಶಾಸಕರು ಸಹಮತ ನೀಡಿಲ್ಲ. ಈ ರೀತಿ ರಾಜಕೀಯ ಇದೆ ಮೊದಲು ಆಗಿಲ್ಲ. ಇದರಲ್ಲಿ ಧರ್ಮಸ್ಥಳವನ್ನು ಎಳೆದು ತರುವುದು ಬೇಡ ಅನ್ನೋ ಅಭಿಪ್ರಾಯ ಬಂದಿದೆ. ಹೀಗಾಗಿ ಸಭೆಯನ್ನು ಅಲ್ಲಿ ನಡೆಸುವುದನ್ನು ಕೈ ಬಿಡಲಾಯಿತು ಎಂದು ಆರ್.ಅಶೋಕ ಹೇಳಿದ್ದಾರೆ.



