ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕರ್ನಾಟಕ ಸೇರಿದಂತೆ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಎಸ್ಐಆರ್ ಘೋಷಣೆ ಮಾಡಿದೆ. 3ನೇ ಹಂತದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಘೋಷಿಸಲಾಗಿದೆ. ಮೇ 30ರಿಂದ ಇದು ನಡೆಯಲಿದೆ.
ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ, ಮಣಿಪುರ, ತ್ರಿಪುರ, ಹಿರಿಯಾಣ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಒಡಿಶಾ, ಮಿಜೋರಾಂ, ಸಿಕ್ಕಿಂ, ಮೇಘಾಲಯ, ಉತ್ತರಾಖಂಡ, ಜಾರ್ಖಂಡ್, ಚಂಡೀಗಢ, ಪಂಜಾಬ್, ದೆಹಲಿ, ದಮನ್ ಮತ್ತು ಡಿಯು, ದಾದರ್ ಮತ್ತು ನಗರ ಹವೇಲಿಯಲ್ಲಿ 3ನೇ ಹಂತದ ಎಸ್ಐಆರ್ ನಡೆಯಲಿದೆ. 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು 36.73 ಕೋಟಿ ಮತದಾರರ ಮನೆಗಳ ತೆರಳಿ ಪರಿಶೀಲನೆ ನಡೆಸಲಿದ್ದಾರೆ.
ಈಗಾಗ್ಲೇ 10 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ನಡೆದಿದೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್, ಕೇರಳಂ, ಪುದುಚೇರಿ, ಮಧ್ಯಪ್ರದೇಶ, ಗೋವಾ, ಬಿಹಾರ, ಛತ್ತೀಸಗಢ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷ ದೀಪದಲ್ಲಿ ಎಸ್ಐಆರ್ ನಡೆಸಲಾಗಿದೆ. 99 ಕೋಟಿ ಮತದಾರರು ಈಗಾಗ್ಲೇ ಪರಿಷ್ಕರಣೆಯಲ್ಲಿ ಭಾಗವಹಿಸಿದ್ದಾರೆ.



