LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮದ್ವೆಯಾದ 40 ದಿನಕ್ಕೇ ವಿಚ್ಛೇದನಕ್ಕೆ ಬಂತು

ಪ್ರಜಾಸ್ತ್ರ ಸುದ್ದಿ

ಆಗ್ರಾ(Agra): ಇವತ್ತಿನ ದಿನಮಾನದಲ್ಲಿ ಮದುವೆಯಾಗುವುದು(Marriage) ತುಂಬಾ ಕಷ್ಟ ಎಂದು ಹೇಳುತ್ತಾರೆ. ಆದರೆ, ಇನ್ನೊಂದು ಕಡೆ ಡಿವೋರ್ಸ್(Divorce) ಪಡೆಯುವುದು ತುಂಬಾ ಸರಳವಾಗಿದೆ. ಯಾವೆಲ್ಲ ಕಾರಣಕ್ಕೆ ಮದುವೆಗಳು ಮುರಿದು ಬೀಳುತ್ತಿವೆ ಎಂದು ನೋಡಿದರೆ ವಿಚಿತ್ರ ಎನಿಸುತ್ತಿದೆ. ಪತಿ ನಿತ್ಯ ಸ್ನಾನ ಮಾಡುವುದಿಲ್ಲವೆಂದು ಮದುವೆಯಾದ 40 ದಿನಕ್ಕೇ ಡಿವೋರ್ಸ್ ಬೇಕು ಎಂದು ಪತ್ನಿ ಹಠ ಹಿಡಿದರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಯುವತಿ ಮೊದಲು ಕೌಟುಂಬಿಕ ಸಲಹಾ ಕೇಂದ್ರವನ್ನು ಸಂಪರ್ಕಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ಹೋಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ನನಗೆ ವಿಚ್ಛೇದನ ಬೇಕು ಎಂದು ದೂರು ನೀಡಿದ್ದಾಳೆ. ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿದಾಗ ಸ್ನಾನದ ವಿಚಾರ ಬೆಳಕಿಗೆ ಬಂದಿದೆ. ಪತಿ ನಿತ್ಯ ಸ್ನಾನ ಮಾಡುವುದಿಲ್ಲ. ತಿಂಗಳಿಗೆ 2-3 ಬಾರಿ ಮಾಡುತ್ತಾರೆ. ಹೀಗಾಗಿ ದೇಹದಿಂದ ಕೆಟ್ಟ ವಾಸನೆ ಬರುತ್ತೆ ಎಂದಿದ್ದಾಳೆ. ಇದನ್ನು ಒಪ್ಪಿಕೊಂಡಿರುವ ಪತಿ ಮದುವೆಯಾದ 40 ದಿನಗಳಲ್ಲಿ 6 ಬಾರಿ ಸ್ನಾನ ಮಾಡಿದ್ದೇನೆ ಎಂದಿದ್ದಾನೆ. ಸೆಪ್ಟೆಂಬರ್ 22ರಂದು ಸಮಾಲೋಚನ ಕೇಂದ್ರಕ್ಕೆ ಹೋಗುವಂತೆ ಪೊಲೀಸರು ಹೇಳಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST