ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandya): ಚಲಿಸುತ್ತಿದ್ದ ಗೂಡ್ಸ್ ವಾಹನ ಮೇಲೆ ಗುರುವಾರ ನಸುಕಿನಜಾವದಲ್ಲಿ ಬೆಂಗಳೂರು-ಮೈಸೂರು ಹಳೆ ಹೆದ್ದಾರಿಯಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಈ ಪ್ರಕರಣ ಸಂಬಂಧ 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ವಿ.ಜೆ ಶೋಭಾರಾಣಿ ಶುಕ್ರವಾರ ತಿಳಿಸಿದ್ದಾರೆ. ರೆಸಾರ್ಟ್ ನಲ್ಲಿ ಅಫಾನ್ ಎಂಬಾತನ ಹುಟ್ಟು ಹಬ್ಬದ ಪಾರ್ಟಿ ಮುಗಿಸಿ ಕಾರಿನಲ್ಲಿ ಬರುತ್ತಿದ್ದ ವೇಳೆ ಕುಡಿದ ನಶೆಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ ಎಂದಿದ್ದಾರೆ.
ಮಂಡ್ಯದ ಮರೀಗೌಡ ಬಡಾವಣೆಯ ಶಶಾಂಕ(25), ಎಚ್.ವಿ ರೋಹನಗೌಡ(23), ಕುವೆಂಪು ನಗರದ ಮಹಮ್ಮದ್ ಉಮರ್(25), ದ್ವಾರಕನಗರದ ಅಫಾನ್(25), ವಿದ್ಯಾನಗರದ ಸಚಿನ(26), ನಿತಿನ್(27) ಹಾಗೂ ಗಾಂಧಿ ನಗರದ ಮೊಹಮ್ಮದ್ ಅಬೂಬಕರ್(25) ಬಂಧಿತ ಆರೋಪಿಗಳು. ಕಾರು ಹಾಗೂ ಪಿಸ್ತೂಲ್, ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಸ್ತೂಲ್ ಹಾಗೂ ಗುಂಡುಗಳನ್ನು ಎಫ್ಎಸ್ಎಲ್ ವರದಿಗೆ ಕಳಿಸಲಾಗಿದೆ. ವರದಿ ಬಂದ ಬಳಿಕ ಏರ್ ಗನ್ ಅಥವ ಫೈರ್ ಗನ್ ಎಂದು ತಿಳಿಯಲಿದೆ.



