LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಂಧನ ಬೆಲೆ ಏರಿಕೆ: ಗಿಗ್ ಕಾರ್ಮಿಕರ ಮುಷ್ಕರ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಗಿಗ್ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬೆಲೆ ಏರಿಕೆಯನ್ನು ಖಂಡಿಸಿ ಮೇ 16 ಶನಿವಾರ ಮಧ್ಯಾಹ್ನ 12ಯಿಂದ ಸಂಜೆ 5ಗಂಟೆಯವರೆಗೂ ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಗಿಗ್ ಹಾಗೂ ಪ್ಲಾಟ್ ಫಾರ್ಮ್ ಸೇವಾ ಕಾರ್ಮಿಕರ ಒಕ್ಕೂಟ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

ಜೊಮಾಟೊ, ಸ್ವಿಗ್ಗಿ, ಬ್ಲಿಂಕಿಟ್, ಡಂಜೊ, ಓಲಾ, ಉಬರ್, ಅರ್ಬನ್ ಕಂಪನಿ, ಅಮೆಜಾನ್, ರಾಪಿಡೊ, ಪೋರ್ಟರ್ ಸೇರಿದಂತೆ ಇತರೆ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದರಿಂದ ಹೊರೆಯಾಗಲಿದೆ. ಹೀಗಾಗಿ ಸರ್ಕಾರ ಹಾಗೂ ಕಂಪನಿಗಳು ಪ್ರತಿ ಕಿಲೋ ಮೀಟರ್ ಗೆ 20 ರೂಪಾಯಿ ಕನಿಷ್ಠ ಸೇವಾ ದರವನ್ನು ಘೋಷಿಸಬೇಕು ಎಂದು ಒತ್ತಾಯಿಸಲಾಗಿದೆ. ಇಂಧನ ಬೆಲೆ ಏರಿಕೆಯಿಂದ 1.2 ಕೋಟಿ ಗಿಗ್ ಕಾರ್ಮಿಕರು ಸಂಕಷ್ಟ ಎದುರಿಸಬೇಕಾಗಿದೆ. ಅವರ ಆದಾಯ ಕಡಿಮೆಯಾಗಲಿದೆ.

Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST