LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಂಡಿ: ನಿವೃತ್ತ ಯೋಧನ ಮೇಲೆ ಭೀಕರ ಹಲ್ಲೆ, ಕೊಲೆಗೆ ಯತ್ನ

ಪ್ರಜಾಸ್ತ್ರ ಸುದ್ದಿ

ಇಂಡಿ(Indi): ನಿವೃತ್ತ ಯೋಧರೊಬ್ಬರ ಮೇಲೆ ಭೀಕರವಾಗಿ ದಾಳಿ ಮಾಡಿದ ಘಟನೆ ನಗರದ ಕೆಇಬಿ ಎದುರುಗಿನ ಮಸೂತಿ ಹತ್ತಿರ ಸೋಮವಾರ ಸಂಜೆ ನಡೆದಿದೆ. ಹಿರೇಮಸಳಿ ಗ್ರಾಮದ ನಿವೃತ್ತ ಯೋಧ ಮಾರುತಿ ಕ್ಷತ್ರಿ ಎಂಬುವರ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಗೆ ಯತ್ನಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ಮುಸುಕುದಾರಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಲ್ಲೆ ನಡೆಸಿದವರು ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST