LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Paris Olympics: ಸೆಮಿ ಫೈನಲ್ ಗೆ ಭಾರತದ ಹಾಕಿ ಪಡೆ

ಪ್ರಜಾಸ್ತ್ರ ಸುದ್ದಿ

ಪ್ಯಾರಿಸ್(Paris): ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್(Olympics)ಟೂರ್ನಿಯಲ್ಲಿ ಭಾರತದ ಹಾಕಿ(Hockey) ತಂಡ ಬ್ರಿಟನ್ ಟೀಂ ಸೋಲಿಸಿ ಸೆಮಿ ಫೈನಲ್ ಗೆ ಎಂಟ್ರಿ ಪಡೆದಿದೆ. ಪುರುಷರ ಹಾಕಿ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಬ್ರಿಟನ್ ಮುಖಾಮುಖಿಯಾಗಿದ್ದವು. 4-2 ಅಂತರದಿಂದ ಗೆಲುವು ಸಾಧಿಸಿದ ಭಾರತದ ತಂಡ ಸೆಮಿ ಫೈನಲ್ ಪ್ರವೇಶಿಸಿತು.

ಭಾರತ ತಂಡದ ನಾಯಕ ಮನ್ ಪ್ರಿತ್ ಸಿಂಗ 22ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ಬ್ರಿಟನ್ ತಂಡದ ಮಾರ್ಟನ್ ಲೀ ಮುಂದಿನ 5 ನಿಮಿಷಗಳಲ್ಲೇ ಗೋಲು ಭಾರಿಸಿ ಸಮಬಲ ಸಾಧಿಸಿದರು. ಒಂದು ತಾಸಿನ ಅವಧಿ ಮುಗಿದರೂ 1-1 ಸಮಬಲವಾಗಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಗೆ ಬರಲಾಯಿತು. ಆಗ ಭಾರತ ತಂಡದ ಕ್ಯಾಪ್ಟನ್ ಮನ್ ಪ್ರಿತ್ ಸಿಂಗ್, ಪಾಲ್ ರಾಜ್ ಕುಮಾರ್, ಉಪಾಧ್ಯಾಯ ಲಲಿತ್ ಕುಮಾರ್, ಸಿಂಗ್ ಸುಖಜೀತ್ ಗೋಲು ಬಾರಿಸುವ ಮೂಲಕ 4-2 ರಿಂದ ಗೆಲುವು ಸಾಧಿಸಿದರು. ಆಗಸ್ಟ್ 6 ಹಾಗೂ 8ರಂದು 2 ಸೆಮಿ ಫೈನಲ್ ಪಂದ್ಯಗಳು ನಡೆಯಲಿವೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST