LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕೇನ್ ವಿಲಿಯಮ್ಸನ್ ವಿದಾಯ

ಪ್ರಜಾಸ್ತ್ರ ಸುದ್ದಿ

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ, ಶ್ರೇಷ್ಠ ಆಟಗಾರ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಕ್ಕೆ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಡುವೆಯೇ ನಿವೃತ್ತಿ ಘೋಷಿಸಿದ್ದಾರೆ. 16 ವರ್ಷಗಳ ಕಾಲ ನ್ಯೂಜಿಲೆಂಡ್ ತಂಡದ ಪರವಾಗಿ ಆಟವಾಡಿದ್ದಾರೆ.

ಏಕದಿನ, ಟೆಸ್ಟ್, ಟಿ-20 ಸೇರಿ 378 ಪಂದ್ಯಗಳನ್ನು ಆಡಿದ್ದಾರೆ. 19,346 ರನ್ ಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ 15 ಶತಕ, 47 ಅರ್ಧಶತಕ, ಟೆಸ್ಟ್ ನಲ್ಲಿ 33 ಶತಕ, 38 ಅರ್ಧಶತಕ, ಟಿ-20ನಲ್ಲಿ 18 ಅರ್ಧಶತಕ ಗಳಿಸಿದ್ದಾರೆ. ನ್ಯೂಜಿಲೆಂಡ್ ಪರವಾಗಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರಾಗಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಒಂದು ಬಾರಿ ಫೈನಲ್, ಮೂರು ಬಾರಿ ಸೆಮಿಫೈನಲ್ ವರೆಗೂ ತಂಡವನ್ನು ತೆಗೆದುಕೊಂಡು ಹೋಗಿದ್ದಾರೆ.

ಪ್ರಸ್ತುತ ಇಂಗ್ಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ 115 ರನ್ ಗಳಿಂದ ನ್ಯೂಜಿಲೆಂಡ್ ಸೋತಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯ, ಎರಡನೇ ಇನ್ನಿಂಗ್ಸ್ ನಲ್ಲಿ 18 ರನ್ ಮಾತ್ರ ಗಳಿಸಿದ್ದಾರೆ. ಇದರ ನಡುವೆಯೇ ಈಗ ನಿವೃತ್ತಿ ಘೋಷಿಸಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST