ಪ್ರಜಾಸ್ತ್ರ ಸುದ್ದಿ
ಭಾನುವಾರ ಸಂಜೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ದಾಖಲಿಸಿತು. ಈ ಮೂಲಕ 2026ನೇ ಸಾಲಿನ ಲೀಗ್ ಪಂದ್ಯಗಳು ಮುಕ್ತಾಯಗೊಂಡಿವೆ. ಡೆಲ್ಲಿ ತಂಡದ ಕೆ.ಎಲ್ ರಾಹುಲ್ 30 ಎಸತೆಗಳಲ್ಲಿ 4 ಸಿಕ್ಸ್, 5 ಫೋರ್ ಗಳೊಂದಿಗೆ 60 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರ ಜೊತೆಗೆ ವಿಶೇಷ ದಾಖಲೆಯನ್ನು ಸಹ ಬರೆದರು.
ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳ ಪರ 30ಕ್ಕೂ ಅಧಿಕ ಸಿಕ್ಸ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಅನ್ನೋ ಸಾಧನೆ ಮಾಡಿದರು. 2018ರಲ್ಲಿ ಪಂಜಾಬ್ ಪರ 32 ಸಿಕ್ಸ್, 2021ರಲ್ಲಿ ಪಂಜಾಬ್ ಪರ 30, 2022ರಲ್ಲಿ ಲಖನ್ ಪರ 30 ಹಾಗೂ 2026ರಲ್ಲಿ ಡೆಲ್ಲಿ ಪರ 31 ಸಿಕ್ಸ್ ಬಾರಿಸಿದರು. ಹೀಗೆ ಮೂರು ತಂಡಗಳಲ್ಲಿ ಆಡಿ 30ಕ್ಕೂ ಹೆಚ್ಚು ಸಿಕ್ಸ್ ಬಾರಿಸಿದ ಮೊದಲ ಬ್ಯಾಟರ್ ಆದರು. ಕ್ರಿಸ್ ಗೇಲ್ ಆರ್ ಸಿಬಿ ಪರ 4 ಬಾರಿ, ಪಂಜಾಬ್ ಪರ 1 ಬಾರಿ ಈ ಸಾಧನೆ ಮಾಡಿದ್ದಾರೆ. ಮ್ಯಾಕ್ಸ್ ವೆಲ್ ಆರ್ ಸಿಬಿ ಪರ 1, ಪಂಜಾಬ್ ಪರ 1 ಸಲ ಈ ದಾಖಲೆ ಮಾಡಿದ್ದಾರೆ.



