LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆ.ಎಲ್ ರಾಹುಲ್ ಅಬ್ಬರ.. ರಾಜಸ್ಥಾನಗೆ ಸೋಲಿನ ಹೊಡೆತ

ಪ್ರಜಾಸ್ತ್ರ ಸುದ್ದಿ

ಜೈಪುರ(Jaipura): ಇಲ್ಲಿನ ಸವಾಯಿ ಮಾನಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ ಆರ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತು. ಜೈಸ್ವಾಲ್ 6, ಸೂರ್ಯವಂಶಿ 4 ರನ್ ಗೆ ಔಟ್ ಆಗಿ ವಿಫಲರಾದರು. ಧ್ರುವ್ ಜುರ್ಲೆ 42, ನಾಯಕ ಪರಾಗ್ 90 ರನ್ ಗಳನ್ನು ಬಾರಿಸುವ ಮೂಲಕ ಡೆಸಿ ಪಡೆಗೆ ಕಾಡಿದರು.

ಜಡೇಜಾ 20, ಡೊನವನ್ ಫೆರೆರಿಯಾ ಅಜೇಯ 47 ರನ್ ಗಳಿಂದ 200 ರನ್ ಗಳ ಗಡಿ ದಾಟಿತು. ಶಿವಂ ದುಬೆ 6, ಆರ್ಚರ್ 1 ರನ್ ಗಳಿಸಿದರು. ಡಿಸಿ ಪರ ಮಿಚಲ್ ಸ್ಟಾರ್ಕ್ 3 ವಿಕೆಟ್ ತೆಗೆದು ಸಂಭ್ರಮಿಸಿದರು. ಜೈಮ್ಸನ್, ಅಕ್ಷರ್ ಪಟೇಲ್, ಟಿ.ನಟರಾಜನ್ ತಲಾ 1 ವಿಕೆಟ್ ಪಡೆದರು.

ಬಿಗ್ ಸ್ಕೋರ್ ಚೇಸ್ ಮಾಡಿದ ಡಿಸಿ ಆರಂಭಿಕ ಜೋಡಿ ನಿಸಾನಕ್ ಹಾಗೂ ಕೆ.ಎಲ್ ರಾಹುಲ್ ಭದ್ರ ಬುನಾದಿ ಹಾಕಿದರು. ಇವರಿಬ್ಬರು 9.3 ಓವರ್ ಗಳಲ್ಲಿ 110 ರನ್ ಕಲೆ ಹಾಕಿತು. 62 ರನ್ ಗಳೊಂದಿಗೆ ಆಡುತ್ತಿದ್ದ ನಿಸಾನಕ್ ವಿಕೆಟ್ ಅನ್ನು ಜಡೇಜಾ ಪಡೆಯುವ ಮೂಲಕ ಇವರಿಬ್ಬರ ಆಟಕ್ಕೆ ಬ್ರೇಕ್ ಹಾಕಿದರು. ಇನ್ನು 5 ಸಿಕ್ಸ್, 6 ಫೋರ್ ಗಳೊಂದಿಗೆ 40 ಬೌಲ್ ಗಳಲ್ಲಿ ಕೆ.ಎಲ್ ರಾಹುಲ್ 75 ರನ್ ಗಳಿಸಿದರು. ನಿತೀಶ್ ರಾಣಾ 33, ಸ್ಟಬ್ಸ್ ಅಜೇಯ 18, ಅಶುತೋಷ್ ಶರ್ಮಾ ಅಜೇಯ 25 ರನ್ ಗಳಿಸಿದರು. 19.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 226 ರನ್ ಗಳಿಸಿ ವಿಜಯ ಸಾಧಿಸಿತು. ಕೆ.ಎಲ್ ರಾಹುಲ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST