LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೊಹ್ಲಿ ಶತಕ.. ಕೆಕೆಆರ್ ಆಸೆ ನುಚ್ಚುನೂರು

ಪ್ರಜಾಸ್ತ್ರ ಸುದ್ದಿ

ರಾಯಪುರ(Raipura): ಅಭಿಮಾನಿಗಳ ನಿರೀಕ್ಷೆ, ಆಸೆಯಂತೆ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದಾರೆ. ಬುಧವಾರ ಸಂಜೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 105 ರನ್ ಗಳಿಸುವ ಮೂಲಕ ಆರ್ ಸಿಬಿ ಗೆಲುವಿನ ರೂವಾರಿ ಆದರು. ಅಲ್ಲದೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಟ್ಯಾಸ್ ಗೆದ್ದ ಆರ್ ಸಿಬಿ ನಾಯಕ ರಜತ್ ಪಟೀದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಕೆಕೆಆರ್ ಮೊದಲು ಬ್ಯಾಟ್ ಮಾಡಿತು.

ಅಂಗಕ್ರಿಷ್ 71, ರಿಂಕು ಸಿಂಗ್ ಅಜೇಯ 49, ಕೆಮರೊನ್ ಗ್ರೀನ್ 32 ರನ್ ಗಳಿಂದಾಗಿ ಕೆಕೆಆರ್ 4 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ನಾಯಕ ರಹಾನ್ 19, ಪಿನ್ ಅಲೆನ್ 18 ರನ್ ಗಳಿಸಿ ವಿಫಲರಾದರು. ಆರ್ ಸಿಬಿ ಪರ ಭುವನೇಶ್ವರ ಕುಮಾರ್, ಹೇಜಲ್ ವುಡ್, ರಸ್ಕಿನ್ ಸಲ್ಮಾ ತಲಾ 1 ವಿಕೆಟ್ ಪಡೆದರು.

ಸವಾಲಿನ ಗುರಿ ಬೆನ್ನು ಹತ್ತಿದ ಆರ್ ಸಿಬಿ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯ ಅಜೇಯ 105 ರನ್ ಗಳಿಂದಾಗಿ 19.1 ಓವರ್ ಗಳಲ್ಲಿ 194 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಜಾಕೆಬ್ ಬೇಥೆಲ್ 15, ದೇವದತ್ ಪಡಿಕಲ್ 39, ನಾಯಕ ಪಟೀದಾರ್ 11, ಟಿಮ್ ಡೇವಿಡ್ 2, ಜತೇಶ್ ಶರ್ಮಾ ಅಜೇಯ 8 ರನ್ ಗಳಿಸಿದರು. ಗೆಲುವಿನೊಂದಿಗೆ ಆರ್ ಸಿಬಿ ಟಾಪ್ 1 ಸ್ಥಾನಕ್ಕೆ ಬಂದಿತು. ಈ ಸೋಲಿನಿಂದಿಗೆ ಕೆಕೆಆರ್ ಪ್ಲೇ ಆಫ್ ಕನಸಿಗೆ ದೊಡ್ಡ ಹೊಡೆತ ಬಿದ್ದಿದೆ. ಕೆಕೆಆರ್ ಪರ ಕಾರ್ತಿಕ್ ತ್ಯಾಗಿ 3 ವಿಕೆಟ್ ಪಡೆದು ಮಿಂಚಿದರು. ಸುನಿಲ್ ನರೈನ್ 1 ವಿಕೆಟ್ ಪಡೆದರು.

ಹಲವು ದಾಖಲೆಗಳ ಬರೆದ ಕೊಹ್ಲಿ: ಐಪಿಎಲ್ ನಲ್ಲಿ ಕೊಹ್ಲಿ ದಾಖಲೆಯ 9ನೇ ಶತಕ ಬಾರಿಸಿದರು. ಬಟ್ಲರ್ 7, ಗೇಲ್, ಕೆ.ಎಲ್ ರಾಹುಲ್ 6, ಸಂಜು ಸ್ಯಾಮ್ಸನ್ 5 ಶತಕ ಬಾರಿಸಿದ್ದಾರೆ. ಟಿ-20 ಕ್ರಿಕೆಟ್ ನಲ್ಲಿ 14 ಸಾವಿರ ರನ್ ಗಳ ಮೈಲುಗಲ್ಲು ಸಾಧಿಸಿದ್ದಾರೆ. ಚೇಸ್ ವೇಳೆ ಅತಿ ಹೆಚ್ಚು ಶತಕ(3) ಬಾರಿಸಿದ ಬ್ಯಾಟರ್ ಎನಿಸಿಕೊಂಡರು. 279 ಪಂದ್ಯಗಳನ್ನು ಆಡುವುದರೊಂದಿಗೆ ಐಪಿಎಲ್ ನಲ್ಲಿ ಧೋನಿ, ರೋಹಿತ್ ದಾಖಲೆ ಮುರಿದರು. 21 ಸಲ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ರೋಹಿತ್ ಶರ್ಮಾ ಜೊತೆಗೆ ಹಂಚಿಕೊಂಡರು. ಎಬಿಡಿ 25, ಗೇಲ್ 22 ಸಲ ಪಡೆದಿದ್ದಾರೆ. ಐಪಿಎಲ್ ನಲ್ಲಿ 12 ಸಲ 400 ರನ್ ಗಳ ಗಡಿ ದಾಟಿದರು. ಆರಂಭಿಕ ಆಟಗಾರನಾಗಿ 6 ಸಾವಿರ ರನ್ ಮಾಡಿದರು. ಹೀಗಾಗಿ ಹಲವು ದಾಖಲೆಗಳನ್ನು ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡರು.

Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST