ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕೇಂದ್ರ ಸರ್ಕಾರದ ವಿಶೇಷ ಅಧಿವೇಶನ ಮುಂದಿನ ವಾರದಿಂದ ನಡೆಯಲಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಎನ್ ಸಿಪಿ ವಿಪ್ ಜಾರಿಗೊಳಿಸಿದೆ. ನವೆಂಬರ್ 29ರೊಳಗೆ ಎಲ್ಲ ಸಂಸದರು ನವದೆಹಲಿಗೆ ಬರಬೇಕು. ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸಬೇಕು ಎಂದು ಕಾಂಗ್ರೆಸ್ ತನ್ನ ಸಂಸದರಿಗೆ ಸೂಚನೆ ನೀಡಿದೆ.
ಲೋಕಸಭೆ ಅಧಿವೇಶನ ನವೆಂಬರ್ 30ರಿಂದ, ರಾಜ್ಯಸಭೆ ಅಧಿವೇಶನ ಡಿಸೆಂಬರ್ 2ರಿಂದ ಶುರುವಾಗಲಿದೆ. ಕ್ಷೇತ್ರ ಮರುವಿಂಗಡನಾ ವ್ಯವಸ್ಥೆ ಜಾರಿಗೆ ಸಂವಿಧಾನ ತಿದ್ದುಪಡಿ ಮಸೂದೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ವಿಶೇಷ ಅಧಿವೇಶನ ಎನ್ ಡಿಎ ಹಾಗೂ ಇಂಡಿಯಾ ಬಣದ ನಡುವೆ ಜಟಾಪಟಿಗೆ ಕಾರಣವಾಗಲಿದೆ.


