LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ರಿಕಾಭವನಕ್ಕೆ ಶೀಘ್ರದಲ್ಲಿ ನಿವೇಶನ: ಶಾಸಕ ಅಶೋಕ ಮನಗೂಳಿ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗವು ನಾಲ್ಕನೇ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಒಳಿತು ಕೆಡುಕುಗಳನ್ನು ಜನರ ಮುಂದಿಡುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಬೇಕಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಸಿಂದಗಿ ನಗರದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಿಂದಗಿ ತಾಲೂಕು ಘಟಕದ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ನಡೆಯುವ ಬೆಳವಣಿಗೆಗಳನ್ನು ನಿಷ್ಪಕ್ಷಪಾತವಾಗಿ ಜನರಿಗೆ ತಲುಪಿಸುವುದರ ಜೊತೆಗೆ ಸರ್ಕಾರದ ಜನಪರ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಪರ್ತಕರ್ತರ ಪಾತ್ರ ಮಹತ್ವದ್ದಾಗಿದೆ. ಪತ್ರಕರ್ತರ ಬಹುದಿನ ಬೇಡಿಕೆಯಾಗಿದ ಪತ್ರಿಕಾ ಭವನವನ್ನು ಅತೀ ಶೀಘ್ರದಲ್ಲಿಯೇ ಮಾಡುಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಕಾನಿಪ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಮಾತನಾಡಿ, ಪತ್ರಕರ್ತರು ಸಾಕಷ್ಟು ಸೌಲಭ್ಯಗಳ ಕೊರತೆಯ ನಡುವೆಯೂ ಸಮಾಜದ ಪರವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಆದ್ದರಿಂದ ಸಿಂದಗಿಯಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಶಾಸಕ ಅಶೋಕ ಮನಗೂಳಿ ಅವರು ವಿಶೇಷ ಆದ್ಯತೆ ನೀಡಿ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಿಂದಗಿ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಜಿಲ್ಲಾ ಪ್ರಧಾನ ಕಾಯದರ್ಶಿ ಇಂದುಶೇಖರ್ ಮಣೂರ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ಮಾತನಾಡಿ, ಪತ್ರಕರ್ತರು ಶೋಷಿತರ ಧ್ವನಿಯಾಗಿ, ಆಡಳಿತದ ಲೋಪದೋಷಗಳನ್ನು ಜನರ ಮುಂದಿಡುವ ಮೂಲಕ ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಂದಗಿ ತಾಲೂಕಿನಲ್ಲಿ ಎಸ್‌ಐಆರ್ ಪ್ರಕ್ರಿಯೆ ಶೇಕಡ 80ರಷ್ಟು ಪೂರ್ಣಗೊಂಡಿದ್ದು, ಉಳಿದಿರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪತ್ರಿಕೆಗಳು ಹಾಗೂ ಮಾಧ್ಯಮಗಳ ಮೂಲಕ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಿ ಸಹಕರಿಸುವಂತೆ ಪತ್ರಕರ್ತರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಪತ್ರಕರ್ತರನ್ನು, ಪತ್ರಿಕಾ ವಿತರಕರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು. ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ರಾಂಪೂರ ಆರೂಢ ಮಠದ ನಿತ್ಯಾನಂದ ಮಹಾರಾಜರು ಸಮ್ಮುಖ ವಹಿಸಿದ್ದರು. ವೇದಿಕೆಯ ಮೇಲೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ್ ಬೆಣ್ಣೂರ, ಪ್ರಾಚಾರ್ಯೆ ಡಾ.ಜೆ.ಸಿ.ನಂದಿಕೊಲ, ಬಿಇಒ ಟಿ.ಎಸ್.ಆಲಗೂರ, ಸಿಪಿಐ ಸುನೀಲ ಮೂಲಿಮನಿ ಇದ್ದರು.

ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿನಿ ಚಾಂದನಿ ಮುಲ್ಲಾ ನಿರೂಪಿಸಿದರು. ಪತ್ರಕರ್ತ ಗುರುರಾಜ ಮಠ ಸ್ವಾಗತಿಸಿದರು. ಶಿವಾನಂದ ಆಲಮೇಲ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಶೇಖ ವಂದಿಸಿದರು. ಸಮಾರಂಭದಲ್ಲಿ ಎಂ.ಎಂ.ಹಂಗರಗಿ, ವಿ.ಬಿ.ಕುರಡಿ, ರಾಜಶೇಖರ ಕೂಚಬಾಳ, ವಾಯ್.ಸಿ.ಮಯೂರ, ತಾರಾನಾಥ ರಾಠೋಡ, ಶಿವಕುಮಾರ ಸಬರದ, ಬಸವರಾಜ ರಂಜುಣಗಿ, ಏಕನಾಥ ದ್ವಾಶ್ಯಾಳ, ಸಂಗನಗೌಡ ಪಾಟೀಲ ಅಗಸಬಾಳ, ಎಂ.ಎ.ಖತೀಬ, ಸಿದ್ದಲಿಂಗ ಕಿಣಗಿ, ನಿಂಗರಾಜ ಅತನೂರ, ರಜತ್ ತಾಂಬೆ, ರಾಮು ಮೋರಟಗಿ, ಪ್ರಶಾಂತ ಕದ್ದರಕಿ, ಶಂಕರಗೌಡ ಬಿರಾದಾರ, ರವಿ ನಾಗಠಾಣ, ಶಾಂತು ರಾಣಾಗೋಳ, ಅನುಸುಬಾಯಿ ಪಾರಗೊಂಡ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ರಶ್ಮಿ ನೂಲಾನವರ, ಸೈನಾಬಿ ಮಸಳಿ, ಅಂಬರೀಷ ಸುಣಗಾರ, ಸುದರ್ಶನ ಜಂಗಣ್ಣಿ, ಪುಟ್ಟು ದೇಸಾಯಿ, ಸಿದ್ದು ಕಡಗಂಜಿ, ನವೀನ ಶೆಳ್ಳಗಿ, ವಿಜಯಕುಮಾರ ಪತ್ತಾರ, ರಣಜಿತಸಿಂಗ್ ರಜಪೂತ, ಯಲ್ಲಾಲಿಂಗ ಮಳ್ಳಿ, ಭೀಮರಾಯ ಕೆಂಭಾವಿ, ವಿನಯಕುಮಾರ ಅಗಸರ, ಈರಣ್ಣ ವಿಶ್ವಕರ್ಮ, ಪಂಡಿತ ಯಂಪುರೆ, ಖಾಜಾಅಮೀನ ಮಕಾಂದಾರ, ವಸಿಂ ಗೋಗಿ, ಶಾಂತು ಹಿರೇಮಠ, ಚಂದ್ರಕಾAತ ಮುಚ್ಚಂಡಿ, ನಿಂಗಣ್ಣ ಯಾಳಗಿ, ಆರೀಫ್ ಅಂತರಗಂಗಿ, ಜಾಹಿರ್‌ಅಬ್ಬಾಸ್ ಮುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪತ್ರಕರ್ತರು, ಸಾರ್ವಜನಿಕರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST