LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಉಡುಪಿ: ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ

ಪ್ರಜಾಸ್ತ್ರ ಸುದ್ದಿ

ಉಡುಪಿ(Udupi): ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಿದ್ದ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾದರು. ಈ ಅಭಿಯಾನ ಹಮ್ಮಿಕೊಂಡಿರುವ ಸುಗಣೇಂದ್ರ ಸ್ವಾಮೀಜಿಗೆ ಅಭಿನಂದನೆಗಳು. ಇದೊಂದು ಸನಾತನ ಸಂಸ್ಕೃತಿಯ ಅಭಿಯಾನ. ಇದರಿಂದ ನನಗೆ ಪ್ರೇರಣೆ ಸಿಕ್ಕಿದೆ. ಭಗವದ್ಗೀತೆಯೊಂದಿಗೆ ಯುವ ಪೀಳಿಗೆಯನ್ನು ಜೋಡಿಸುವ ಕಾರ್ಯವಿದು ಎಂದರು.

ಕನಕದಾಸರ ಭಕ್ತಿ ದೊಡ್ಡದು. ಲೋಕ ಕಲ್ಯಾಣದ ಸಂದೇಶ ಭಗವದ್ಗೀತೆಯಲ್ಲಿದೆ. ಜನಸಂಘ, ಬಿಜೆಪಿ ಉತ್ತಮ ಆಡಳಿತದ ಮಾದರಿ ಉಡುಪಿ ಅಂತಾ ಹೇಳಿದರು. ತಮ್ಮ ಫೋಟೋಗಳನ್ನು ಹಿಡಿದು ನಂತವರಿಂದ ಫೋಟೋಗಳನ್ನು ಪಡೆಯಲು ಎಸ್ ಪಿಜಿಗೆ ಹೇಳಿದರು. ಅದರ ಹಿಂದೆ ನಿಮ್ಮ ವಿಳಾಸ ಬರೆಯಿರಿ. ಅಭಿನಂದನಾ ಪತ್ರ ಕಳಿಸುವೆ ಎಂದರು. ಇದೆ ವೇಳೆ ನವಸಂಕಲ್ಪ ಮಾಡಿ ಅಂತಾ ಕರೆ ಕೊಟ್ಟರು.

ನೀರು ಸಂರಕ್ಷಣೆ ಮಾಡುವುದು, ತಾಯಿ ಹೆಸರಲ್ಲಿ ಒಂದು ಮರ ಅಭಿಯಾನ, ಪ್ರತಿಯೊಬ್ಬರು ಕನಿಷ್ಠ ಒಬ್ಬ ಬಡವರ ಜೀವನ ಸುಧಾರಿಸಿ, ವೋಕಲ್-ಲೋಕಲ್ ಮಂತ್ರ ನಮ್ಮದಾಗಲಿ, ನೈಸರ್ಗಿಕ ಕೃಷಿ ಮಾಡಿ, ಊಟದಲ್ಲಿ ಕಡಿಮೆ ಎಣ್ಣೆ, ಸಿರಿಧಾನ್ಯ ಬಳಸೋಣ, ಯೋಗವನ್ನು ಮಾಡಿ, ಹಸ್ತಪ್ರತಿ ಸಂರಕ್ಷಣೆಗೆ ಸಹಯೋಗ ಕೊಡಿ, ದೇಶದ ಕನಿಷ್ಠಪಕ್ಷ 25 ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತೇನೆ ಅನ್ನೋ ಈ 9 ಸಂಕಲ್ಪಗಳನ್ನು ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಮಠದ ಸ್ವಾಮೀಜಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಂಸದ ಬಿ.ವೈ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಸದ, ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST