LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರ್ ಸಿಬಿ-ಪಂಜಾಬ್ ನಡುವೆ ಕ್ವಾಲಿಫೈ ಪಂದ್ಯ: ವಾತಾವರಣ ಹೇಗಿದೆ?

ಪ್ರಜಾಸ್ತ್ರ ಸುದ್ದಿ

ಚಂಡೀಗಢ(chandigarh): ಐಪಿಎಲ್-2025 ಟೂರ್ನಿ ಕೊನೆಯ ಹಂತಕ್ಕೆ ಬಂದಿದೆ. ಗುರುವಾರ ಸಂಜೆ ಮೊದಲ ಕ್ವಾಲಿಫೈ ಪಂದ್ಯ ಆರ್ ಸಿಬಿ ಹಾಗೂ ಪಂಜಾಬ್ ನಡುವೆ ನಡೆಯಲಿದೆ. ನ್ಯೂ ಚಂಡೀಗಢದ ಮುಲ್ಲನ್ ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಪಂದ್ಯ ಶುರುವಾಗಲಿದೆ. ಹೀಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಲೀಗ್ ನ ಕೊನೆಯ ಪಂದ್ಯದಲ್ಲಿ ಲಖನೌ ವಿರುದ್ಧ ಆರ್ ಸಿಬಿ ಭರ್ಜರಿಯಾಗಿ ಗೆಲ್ಲುವ ಮೂಲಕ 2ನೇ ಸ್ಥಾನಕ್ಕೇರಿತು. ಹೀಗಾಗಿ ಇಂದಿನ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಪಿಚ್ ಹೇಗಿದೆ?: ಮುಲ್ಲನ್ ಪುರ ಕ್ರಿಕೆಟ್ ಮೈದಾನದ ಬ್ಯಾಟಿಂಗ್ ಗೆ ಅನುಕೂಲವಾಗುವ ರೀತಿಯಲ್ಲಿದೆ. ಆದ್ದರಿಂದ ಟಾಸ್ ಗೆಲ್ಲುವುದು ಮುಖ್ಯವಾಗಿದೆ. ಬ್ಯಾಟರ್ ಗಳು ಅದ್ಬುತವಾಗಿ ಆಡಲು ಅವಕಾಶವಿದ್ದು, 200ಕ್ಕಿಂತ ಅಧಿಕ ರನ್ ಗಳಿಸಬಹುದಾಗಿದೆ. ಅಲ್ಲದೇ 2ನೇ ಇನ್ನಿಂಗ್ಸ್ ಗೆ ಇನ್ನು ಅನುಕೂಲವೆಂದು ಹೇಳಲಾಗುತ್ತೆ. ಇಲ್ಲಿ ಸ್ಪಿನ್ನರ್ ಗಳಿಂತ ವೇಗದ ಬೌಲರ್ ಗಳಿಗೆ ವಿಕೆಟ್ ತೆಗೆಯುವ ಸಾಧ್ಯತೆ ಹೆಚ್ಚಿದೆ. ಈ ಋತುವಿನ 37ನೇ ಪಂದ್ಯವನ್ನು ಇಲ್ಲಿ ನಡೆದಿದ್ದು, ಪಂಜಾಬ್ ತಂಡವನ್ನು ಆರ್ ಸಿಬಿ ಸೋಲಿಸಿದೆ. ಇಲ್ಲಿ 9 ಪಂದ್ಯಗಳು ನಡೆದಿವೆ. ಮೊದಲು ಇನ್ನಿಂಗ್ಸ್ ಆಡಿದವರು 5, 4 ಬಾರಿ 2ನೇ ಇನ್ನಿಂಗ್ಸ್ ಆಡಿದವರಿಗೆ ಗೆಲುವು ಬಂದಿದೆ.

ಹವಾಮಾನ ವರದಿ ಏನು ಹೇಳುತ್ತೆ?: ಎಲ್ಲೆಡೆ ಮಳೆ ಶುರುವಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ಎದೆಯಲ್ಲಿ ಢವಢವ. ಆದರೆ, ಇಲ್ಲಿ ವಾತಾವರಣ ಸ್ಪಷ್ಟವಾಗಿರಲಿದೆ ಎಂದು ತಿಳಿದು ಬಂದಿದೆ. ಈ ಮೈದಾನ ಗುಡ್ಡುಗಾಡು ಪ್ರದೇಶಕ್ಕೆ ಹತ್ತಿರವಿದ್ದು ಇಬ್ಬನಿ ಬೀಳುವ ಸಾಧ್ಯತೆಯಿದೆ. ಸಂಜೆ 7 ಗಂಟೆಗೆ ತಪಮಾನ ಶೇಕಡ 32 ಡಿಗ್ರಿ ಸೆಲ್ಸಿಯಸ್ ನಿರೀಕ್ಷೆಯಿದೆ. 8 ಗಂಟೆ ವೇಳೆಗೆ ಮೋಡ ಕವಿದ ವಾತಾವರಣ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಲಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST