LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸತ್ಯವನ್ನು ಎದುರಿಸಲು ಆಗದೆ ಮೋದಿ ಸದನಕ್ಕೆ ಬರುತ್ತಿಲ್ಲ: ರಾಹುಲ್ ಗಾಂಧಿ

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಪ್ರಧಾನಿಗೆ ವಿರೋಧ ಪಕ್ಷಗಳ ಸದಸ್ಯರಿಂದ ಬೆದರಿಕೆಯಿದೆ. ಆದ್ದರಿಂದ ಸದನಕ್ಕೆ ಬರಬೇಡಿ ಎಂದು ನಾನೇ ಹೇಳಿದ್ದೇನೆ ಅಂತಾ ಸ್ಪೀಕರ್ ಓಂ ಬಿರ್ಲಾ ಗುರುವಾರ ಹೇಳಿದ್ದರು. ಈ ಬಗ್ಗೆ ವಿಪಕ್ಷಗಳ ಸದಸ್ಯರು ಮತ್ತಷ್ಟು ಕೆರಳಿ ಕೆಂಡವಾಗಿದ್ದಾರೆ. ಸತ್ಯವನ್ನು ಎದುರಿಸಲು ಆಗದೆ ಪ್ರಧಾನಿ ಮೋದಿ ಸದನಕ್ಕೆ ಬರುತ್ತಿಲ್ಲವೆಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಬಜೆಟ್ ಮೇಲೆ ಚರ್ಚೆ ನಡೆಸಲು ಸರ್ಕಾರಕ್ಕೆ ಭಯ. ಯಾಕಂದರೆ ಅಮೆರಿಕಾದೊಂದಗಿನ ವ್ಯಾಪಾರ ಒಪ್ಪಂದ, ಆ ವಿಚಾರದಲ್ಲಿ ನಡೆದುಕೊಂಡ ರೀತಿ, ರೈತರ ಮೇಲೆ ಬೀರುವ ಪರಿಣಾಮ ಎಂದಿದ್ದಾರೆ. ಅಲ್ಲದೆ ಸೇನೆ ಮಾಜಿ ಜನರಲ್ ಮನೋಜ್ ಮುಕಂದ್ ನರವಣೆಯವರ ಪುಸ್ತಕಕ್ಕೆ ಪ್ರಧಾನಿ ಹೆದರಿದ್ದಾರೆ. ಸಂಸದರಿಗೆ ಹೆದರಿಲ್ಲ. ಹೀಗಾಗಿಯೇ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಸಲ್ಲಿಸಲು ಬರಲಿಲ್ಲ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST