LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾವಣನ 10 ತಲೆಗಳಲ್ಲಿ ರಾಹುಲ್, ಮಸ್ಕ್, ಅಖಿಲೇಶ್ ಫೋಟೋ ವಿವಾದ

ಪ್ರಜಾಸ್ತ್ರ ಸುದ್ದಿ

ಲಖನೌ(Lucknow): ದಸರಾ ಹಬ್ಬದ ಹಿನ್ನಲೆಯಲ್ಲಿ ನಡೆಯುವ ರಾವಣನ ಪ್ರತಿಕೃತಿ ದಹನ ನಡೆಸಲಾಗುತ್ತೆ. ಇದು ಹಲವು ಕಾರಣಗಳಿಗೆ ಈ ಬಾರಿ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದ ಲಖನೌ ನಗರದಲ್ಲಿ ಅನೇಕ ಕಡೆ ಅಳವಡಿಸಿರುವ ಫ್ಲೆಕ್ಸ್ ನಲ್ಲಿ ರಾವಣನ 10 ತಲೆಗಳಲ್ಲಿ ರಾಜಕೀಯ ನಾಯಕರು, ಉದ್ಯಮಿಗಳ ಫೋಟೋ ಹಾಕಿದ್ದು, ವಿವಾದಕ್ಕೆ ಕಾರಣವಾಗಿದೆ.

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್, ಅಜಮ್ ಖಾನ್, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್, ಯುಎಸ್ ಕಾಂಗ್ರೆಸ್ ಮಹಿಳೆ ಇಲ್ಹಾನ್ ಓಮರ್,  ಉದ್ಯಮಿಗಳಾದ ಎಲಾನ್ ಮಸ್ಕ್, ಜಾರ್ಜ್ ಸೊರೊಸ್, ಬಾಂಗ್ಲಾದೇಶದ ಅರ್ಥಶಾಸ್ತ್ರಜ್ಞ ಮೊಹಮ್ಮದ್ ಯೂನಸ್, ಅತಿಕ್ ಮಹ್ಮದ್, ಮುಖ್ತಾರ್ ಅನ್ಸಾರಿ ಫೋಟೋಗಳಿವೆ. ಅತಿಕ್ 2023ರಲ್ಲಿ ಜೈಲಿನಲ್ಲಿದ್ದಾಗಲೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾನೆ. ಅನ್ಸಾರಿ ಸಹ ಜೈಲಿನಲ್ಲಿ 2024ರಲ್ಲಿ ಮೃತಪಟ್ಟಿದ್ದಾನೆ.

ಸನಾತನ ರಕ್ಷಾ ಸಂಘಟನೆಯು ಈ ರೀತಿಯ ಫ್ಲೆಕ್ಸ್ ಗಳನ್ನು ನಗರದಲ್ಲಿ ಅಳವಡಿಸಿದೆ. ರಾವಣ, ಸನಾತನ ಭಾರತದ ಶತ್ರುಗಳು ಎಂದು ಬರೆದು ಬೃಹತ್ ಫ್ಲೆಕ್ಸ್ ಗಳನ್ನು ಹಾಕಿದ್ದು, ವಿವಾದ ಪಡೆದುಕೊಂಡಿದೆ. ಎಸ್ಪಿ ಪಕ್ಷದ ಕಾರ್ಯಕರ್ತರು ಇವುಗಳನ್ನು ತೆರವು ಹಾಕಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST