LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

2ನೇ ಬಾರಿ ಕಪ್ ಗೆಲ್ಲುವ ಸನೀಹದಲ್ಲಿ RCB

ಪ್ರಜಾಸ್ತ್ರ ಸುದ್ದಿ

ಅಹಮದಾಬಾದ್(Ahmedabad): ಕ್ರಿಕೆಟ್ ಪ್ರೇಮಿಗಳಿಗೆ ಭಾನುವಾರ ಭರ್ಜರಿ ಕಿಕ್ ಕೊಡುವ ಪಂದ್ಯ ಇದ್ದು, ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಐಪಿಎಲ್-2026ರ ಫೈನಲ್ ಪಂದ್ಯಕ್ಕೆ ಕೆಲ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹಾಲಿ ಚಾಂಪಿಯನ್ ಆರ್ ಸಿಬಿ ಫೈನಲ್ ಗೆ ಬಂದಿದೆ. ಸಂಜೆ ನಡೆಯುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕೆ ಇಳಿಯುತ್ತಿದೆ.

ಪ್ಲೇ ಆಫ್ ಮೊದಲ ಪಂದ್ಯದಲ್ಲಿ ಜಿಟಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿರುವ ಆರ್ ಸಿಬಿ ತಂಡದ ಮೇಲೆ ಎಲ್ಲ ನಿರೀಕ್ಷೆಯಿದೆ. ಎಸ್ಆರ್ ಎಚ್ ವಿರುದ್ಧ ಗೆಲ್ಲುವ ಮೂಲಕ ಫೈನಲ್ ಗೆ ಬಂದಿರುವ ಜಿಟಿ ಪಡೆಗೆ ಸೋಲಿನ ಸೇಡು ತೀರಿಸಿಕೊಳ್ಳುವ ಹಾಗೂ ಕಪ್ ಗೆಲ್ಲುವ ತವಕವಿದೆ. ಮತ್ತೊಂದು ಕಡೆ ರಜತ್ ಪಟೀದಾರ್ ನಾಯಕತ್ವದ ಆರ್ ಸಿಬಿ 2ನೇ ಬಾರಿಗೆ ಕಪ್ ಗೆಲ್ಲುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಸಂತೋಷ ನೀಡಬೇಕು ಎನ್ನುತ್ತಿದೆ. ಮೊದಲ ಕಪ್ ಗೆಲ್ಲಲು ಬರೋಬ್ಬರಿ 18 ವರ್ಷಗಳನ್ನು ಆರ್ ಸಿಬಿ ತೆಗೆದುಕೊಂಡಿತು. ಈಗ 2ನೇ ಕಪ್ ಗೆಲ್ಲುವ ಅವಕಾಶ ಬಂದಿದ್ದು, ಎಲ್ಲೂ ಎಡವದಂತೆ ಆಟಗಾರರು ಆಡಿ ಕಪ್ ಗೆಲ್ಲಬೇಕು ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST