LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜೀನಾಮೆ ಕೊಡುವರನ್ನು ತಡೆಯಲು ಆಗಲ್ಲ: ಸಿಎಂ ಡಿಕೆಶಿ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜೀನಾಮೆ ಕೊಡುವುದು ಇವೆಲ್ಲ ರಾಜಕೀಯದಲ್ಲಿ ನಡೆಯುತ್ತಿರುತ್ತೆ. ರಾಜೀನಾಮೆ ಕೊಡುವರನ್ನು ಯಾರೂ ತಡೆಯಕ್ಕೆ ಆಗಲ್ಲ. ಪಕ್ಷ ಬೇಕು. ಭವಿಷ್ಯ ಬೇಕು ಅಂದರೆ ಮೊದಲು ಪಕ್ಷ. ಧರ್ಮಸಿಂಗ್ ಕಾಲದಲ್ಲಿ, ಬೇರೆ ಬೇರೆ ಕಾಲದಲ್ಲಿ ಮಂತ್ರಿ ಸ್ಥಾನದಿಂದ ಹೊರಗೆ ಇಟ್ಟಾಗ ನಾನು, ಪರಮೇಶ್ವರ್ ಅವರು ರಾಜೀನಾಮೆ ಕೊಡಬಹುದಿತ್ತಲ್ಲವಾ, ಇಬ್ಬರು ತಾಳ್ಮೆಯಿಂದ ಇರಲಿಲ್ಲವಾ. ವೀರೇಂದ್ರ ಪಾಟೀಲ ಕಾಲದಲ್ಲಿ ಬಂಗಾರಪ್ಪನವರಿಗೆ ಕೊಟ್ಟಿರಲಿಲ್ಲ. ಖರ್ಗೆ, ಧರ್ಮಸಿಂಗ್ ಅವರಿಗೆ ಕೊಟ್ಟಿರಲಿಲ್ಲ. ಅವರೆಲ್ಲ ಮುಖ್ಯಮಂತ್ರಿ ಆಗಲಿಲ್ಲವಾ, ಇಂತಹ ಸಂದರ್ಭದಲ್ಲಿ ತಾಳ್ಮೆಯಿಂದ ಇರಬೇಕಾಗುತ್ತೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಇನ್ನೇನು ಹೊಸದಿಲ್ಲ. ಕೆಲವು ಕಾರ್ಯಕ್ರಮಗಳು ಇವೆ. ಎಲ್ಲ ಸಚಿವರು ನಾಳೆಯಿಂದಲೇ ಕ್ಷೇತ್ರಗಳಿಗೆ ಹೋಗಿ ಅತಿವೃಷ್ಟಿ, ಅನಾವೃಷ್ಟಿ ಪ್ರದೇಶಗಳಿಗೆ ಭೇಟಿ ಮಾಡಬೇಕು ಎಂಧು ಹೇಳಿದ್ದೇನೆ. ಎಲ್ಲ ಜಿಲ್ಲೆಗಳಿಗೂ ಹೋಗಬೇಕು ಎಂದು ಅಧಿಕಾರಿಗಳಿಗೂ ಹೇಳಿದ್ದೇನೆ.

ಪಕ್ಷ ತುಂಬಾ ಮುಖ್ಯ. ರಾಜೀನಾಮೆ ಕೊಟ್ಟರೆ ಕ್ಷಣದಲ್ಲಿ ಅಂಗೀಕಾರ ಮಾಡಲಾಗುತ್ತೆ. ಈಗಾಗ್ಲೇ ನಾವು ಬೋರ್ಡ್, ಕಾರ್ಪೂರೇಷನ್ ಹೊಸದಾಗಿ ಮಾಡುತ್ತಿದ್ದೀವಿ. ಎರಡುವರೆ ವರ್ಷದ ಬಗ್ಗೆ ಈ ಮೊದಲೇ ಹೇಳಿದ್ದೇವು. ಎಂಎಲ್ಸಿ ಎಲ್ಲರನ್ನು ಒಬ್ಬಬ್ಬರನ್ನು ಕರೆದು ಮಾತನಾಡ್ತೀನಿ ಎಂದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST