ಪ್ರಜಾಸ್ತ್ರ ಸುದ್ದಿ
ಲಖನೌ(Lacknow): ಆನ್ಲೈನ್ ಪೇಮೆಂಟ್ ಮೂಲಕ ನಡೆಸುವ ವ್ಯವಹಾರದ ಮೇಲೆ ಕೇಂದ್ರ ಸರ್ಕಾರ ಶುಲ್ಕ ವಿಧಿಸುವ ನಿರ್ಧಾರವನ್ನು ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ಖಂಡಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇದು ಡಿಜಿಟಲ್ ಪಾವತಿಗಳ ಮೇಲೆ ತೆರಿಗೆ ವಿಧಿಸಿದಂತೆ ಎಂದು ಆರೋಪಿಸಿದ್ದಾರೆ.
ಹಣದುಬ್ಬರ ಹಾಗೂ ಭ್ರಷ್ಟಾಚಾರದ ಬಗ್ಗೆ ಸರ್ಕಾರದ ಬಳಿ ಉತ್ತರವಿಲ್ಲ. ಜನರ ವಹಿವಾಟಿನಿಂದ ಹಣ ಗಳಿಸುವ ಮಾರ್ಗವಿದು. ಇದೆ ಇವರ ಟ್ರಿಲಿಯನ್ ಡಾಲರ್ ಮಾಡುವ ದಾರಿ. ತೆರಿಗೆ ಜೀವಿಗಳು ಈ ರೀತಿ ಹಣ ತೆಗೆಯುವುದನ್ನು ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.


