LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೇಶದ ಮೊದಲ ದಯಾಮರಣ, ಹರೀಶ್ ರಾಣಾ ನಿಧನ

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದ 31 ವರ್ಷದ ಹರೀಶ್ ರಾಣಾ ದಯಾಮರಣದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಮಾರ್ಚ್ 14ರಂದು ಗಾಜಿಯಾಬಾದ್ ಮನೆಯಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಮಂಗಳವಾರ ಆಸ್ಪತ್ರೆಯಲ್ಲಿ ಹರೀಶ್ ರಾಣಾ ನಿಧನರಾದರು.

2013ರಲ್ಲಿ ಬಿ.ಟೆಕ್ ಅಂತಿಮ ವರ್ಷ ಓದುತ್ತಿದ್ದಾಗ ವಸತಿ ನಿಲಯದ 4ನೇ ಮಹಡಿಯಿಂದ ಬಿದ್ದಿದ್ದ ಹರೀಶ್ ರಾಣಾ ಕೋಮಾದಲ್ಲಿದ್ದರು. ಕಳೆದ 13 ವರ್ಷಗಳಿಂದ ಹೆತ್ತವರು ಮಗನ ಸೇವೆ ಮಾಡಿದ್ದಾರೆ. ಜಗತ್ತಿನ ಅರಿವೇ ಇಲ್ಲದೆ ಕೇವಲ ಉಸಿರಾಟದ ಮೂಲಕ ಜೀವಿಸಿದ್ದ ಹರೀಶ್ ಗೆ ದಯಾಮರಣದ ಕುರಿತು ಅರ್ಜಿ ಸಲ್ಲಿಸಲಾಗಿತ್ತು. ಮಾರ್ಚ್ 11ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಹರೀಶಗೆ ನೀಡುತ್ತಿದ್ದ ಜೀವರಕ್ಷಕ ವ್ಯವಸ್ಥೆಯನ್ನು ಮಾನವೀಯ ರೀತಿಯಲ್ಲಿ ಹಿಂಪಡೆಯಬೇಕು. ಗೌರವಯುತವಾಗಿ ಜೀವ ಬಿಡಲು ಅವಕಾಶ ನೀಡಬೇಕು ಎಂದು ಹೇಳಿತ್ತು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST