LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೆಮಿ ಫೈನಲ್ ಗೆ ಕುಸ್ತಿಪಟು ವಿನೇಶಾ ಫೋಗೆಟ್

ಪ್ರಜಾಸ್ತ್ರ ಸುದ್ದಿ

ಪ್ಯಾರಿಸ್(Paris): ಭಾರತದ ಖ್ಯಾತ ಮಹಿಳಾ(Wrestler) ಕುಸ್ತಿಪಟುಗಳಲ್ಲಿ ಒಬ್ಬರಾದ ವಿನೇಶಾ ಫೋಗೆಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ(Olympics) ಸೆಮಿ ಫೈನಲ್ ಪ್ರವೇಶ ಮಾಡುವ ಪದಕದ ನಿರೀಕ್ಷೆ ಮೂಡಿಸಿದ್ದಾರೆ. 50 ಕೆಜಿ ವಿಭಾಗದಲ್ಲಿ ಉಕ್ರೇನ್ ನ ಒಕ್ಸಾನಾ ಲಿವಾಚ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಸೆಮಿ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.

ನಾಲ್ಕು ಬಾರಿ ವಿಶ್ವ ಚಾಂಪಿಯನ್, ಚಿನ್ನದ ಪದಕ ವಿಜೇತ ಜಪಾನಿನ ಯುಯಿ ಸುಸಾಕಿ ಅವರನ್ನು ಆರಂಭಿಕ ಸುತ್ತಿನಲ್ಲಿ ಸೋಲಿಸುವುದರೊಂದಿಗೆ ಕ್ವಾಟರ್ ಫೈನಲ್ ಪ್ರವೇಶಿಸಿದ್ದರು. ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಸೂಸಾಕಿಗೆ ಇದು ಮೊದಲ ಸೋಲು. ಇಂದು ನಡೆದ ಪಂದ್ಯದಲ್ಲಿ 7-5 ಅಂತರದಿಂದ ಉಕ್ರೇನ್ ಎದುರಾಳಿ ವಿರುದ್ಧ ಜಯ ಸಾಧಿಸಿದರು. ಸೆಮಿ ಫೈನಲ್ ನಲ್ಲಿ ಕ್ಯೂಬಾದ ಯಸ್ನಿಲಿಸ್ ಗುಜ್ಮಾನ್ ವಿರುದ್ಧ ಮಂಗಳವಾರ ರಾತ್ರಿ 10.30ಕ್ಕೆ ನಡೆಯುವ ಪಂದ್ಯದಲ್ಲಿ ವಿನೀಶಾ ಫೋಗೆಟ್(vinesh phogat) ಎದುರಾಗಲಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST