ಪ್ರಜಾಸ್ತ್ರ ಸುದ್ದಿ
ಬೀದರ(Bidara): ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬರೋಬ್ಬರಿ 45 ಕೋಟಿ ರೂಪಾಯಿ ಹಗರಣ ಪ್ರಕರಣ ಸಂಬಂಧ, ವಿಶ್ರಾಂತ ಕುಲಪತಿ ಸೇರಿದಂತೆ 6 ಜನರ ಬಂಧನವಾಗಿದೆ. ಲೋಕಾಯುಕ್ತ ಪೊಲೀಸರು ನಿವೃತ್ತ ಕುಲಪತಿ ಎಚ್.ಡಿ ನಾರಾಯಣಸ್ವಾಮಿ, ನಿವೃತ್ತ ಕಂಟ್ರೋಲರ್ ಕೆ.ಎಲ್ ಸುರೇಶ ಸೇರಿ 6 ಜನರ ಬಂಧನವಾಗಿದೆ.
2017-18ರ ಅವಧಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ 45 ಕೋಟಿಗೂ ಹೆಚ್ಚಿನ ಅಕ್ರಮ ಎಸಗಿರುವ ಆರೋಪವಿದೆ. ಅಂದಿನ ಕುಲಪತಿ ಎಚ್.ಡಿ ನಾರಾಯಣಸ್ವಾಮಿ, ಅಂದಿನ ಕಂಟ್ರೋಲರ್ ಕೆ.ಎಲ್ ಸುರೇಶ, ವಿಶ್ವವಿದ್ಯಾಲಯದ ಎಫ್ ಡಿಎ ಮೃತ್ಯಂಜಯ ಹಿರೇಮಠ, ಬೆಂಗಳೂರು ಎಂಟರ್ ಪ್ರೈಸೆಸ್ ಮಾಲೀಕ ಬೋಪಣ್ಣ, ಮಂಜುನಾಥ ಹಾಗೂ ರಾಮಗೊಂಡ ಅವರು ಕೂಡಿಕೊಂಡು ಅಕ್ರಮ ನಡೆಸಿದ್ದಾರೆ ಅನ್ನೋ ಆರೋಪವಿದೆ. ಕೋರ್ಟ್ ವಾರೆಂಟ್ ಜಾರಿಗೊಳಿಸಿದ್ದರಿಂದ ಇವರ ಬಂಧನವಾಗಿದೆ. ಈಗ ಬೀದರ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.



