ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು, ಇಂದು ಸಂಜೆ 20 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಚಿವರ ಅಂತಿಮ ಪಟ್ಟಿ ಸಿದ್ಧಪಡಿಸಿದೆ. ಸಂಜೆ 4.05ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಯಾವೆಲ್ಲ ಶಾಸಕರಿಗೆ ಸಚಿವ ಸ್ಥಾನ ಒಲಿದಿದೆ ಅನ್ನೋದು ಇಲ್ಲಿದೆ ನೋಡಿ.
ಸಂತೋಷ ಲಾಡ್, ರುದ್ರಪ್ಪ ಲಮಾಣಿ, ಜಮೀರ್ ಅಹ್ಮದ್ ಖಾನ್, ಮಧು ಬಂಗಾರಪ್ಪ, ಬಿ.ನಾಗೇಂದ್ರ, ಶಿವರಾಜ ತಂಗಡಗಿ, ಟಿ.ರಘುಮೂರ್ತಿ, ಗಾಯತ್ರಿ ಶಾಂತೇಗೌಡ, ಬಸವರಾಜ ರಾಯರೆಡ್ಡಿ, ಲಕ್ಷ್ಮಣ ಸವದಿ, ವಿಜಯಾನಂದ ಕಾಶಪ್ಪನವರ, ಕೆ.ಎಂ.ಶಿವಲಿಂಗೇಗೌಡ, ಡಾ.ಅಜಯ್ ಸಿಂಗ್, ಮಂಕಾಳ ವೈದ್ಯ, ಪುಟ್ಟರಂಗಶೆಟ್ಟಿ, ಎಚ್.ಸಿ.ಬಾಲಕೃಷ್ಣ, ಎನ್.ಚಲುವರಾಯಸ್ವಾಮಿ, ರಿಜ್ವಾನ್ ಅರ್ಷದ್, ಕೆ.ಎಸ್.ಬಸವಂತಪ್ಪ, ಪಿ.ಎಂ.ನರೇಂದ್ರಸ್ವಾಮಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.



