ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ವಿಡಿಯೋ ಹಂಚಿದವರ ವಿರುದ್ಧ ಅಲ್ಲ ಮಾಡಿದವರ ಹಾಗೂ ಮಾಡಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಹೆಸರು ಬಹಿರಂಗವಾದರೆ ಕೋಲಾಹಲವಾಗುತ್ತದೆ. ಇದು ತಮ್ಮ ಬುಡಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಜಾರಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಈ ಕುರಿತು ತನಿಖೆ ನಡೆಸಬೇಕೇ ಬೇಡವೆ ಎನ್ನುವುದರ ಕುರಿತು ಕೆಲವರು ಸಿದ್ಧರಾಮಯ್ಯ ಪರ ಇದ್ದಾರೆ. ಉಳಿದವರು ವಿರುದ್ಧವಾಗಿದ್ದಾರೆ. ಇದಕ್ಕಾಗಿ 15 ಕೋಟಿ ರೂಪಾಯಿ ಕಪ್ಪು ಹಣದ ವಹಿವಾಟು ನಡೆದಿದೆ. ಇದು ಎಲ್ಲಿಂದ ಬಂತು ಅನ್ನೋದು ಗೊತ್ತಾಗಬೇಕು. ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಈ ಕುರಿತು ಮೌನ ಮುರಿಯಬೇಕು. ಇದರ ಹಿಂದೆ ಮಹಾ ನಾಯಕನಿದ್ದಾನೋ ಚೋಟಾ ನಾಯಕನಿದ್ದಾನೋ ಗೊತ್ತಾಗಲಿದೆ ಎಂದು ಕಿಡಿ ಕಾರಿದ್ದಾರೆ.


