LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಧಾರವಾಡ: ಅಸ್ತಿಪಂಜರ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್

ಪ್ರಜಾಸ್ತ್ರ ಸುದ್ದಿ

ಧಾರವಾಡ(Dharwad): ಇಲ್ಲಿನ ಮಾಳಮಡ್ಡಿಯಲ್ಲಿರುವ ಮನೆಯೊಂದರಲ್ಲಿ ವ್ಯಕ್ತಿಯೊಬ್ಬನ ಅಸ್ತಿಪಂಜರ ಕಳೆದ ಆಗಸ್ಟ್ 14ರಂದು ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದವರು ಯಾರು ಇಲ್ಲದ ಕಾರಣ ಪ್ರಕರಣ ದಾಖಲಿಸಿರಲಿಲ್ಲ. ಆದರೂ ಇದೊಂದು ನಿಗೂಢ(Mysterious Death) ಪ್ರಕರಣವಾಗಿ ಜನರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಮೃತ ವ್ಯಕ್ತಿಯ ತಾಯಿ ಹಾಗೂ ಸಹೋದರ ಪ್ರತ್ಯಕ್ಷರಾಗಿ ಮಗನ ಸಾವು ಸಹಜವಲ್ಲ, ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.

ಮನೆಯಲ್ಲಿ ಬೆಡ್ ಮೇಲೆ ಮಲಗಿರುವ ಸ್ಥಿತಿಯಲ್ಲಿ ಮೃತ ವ್ಯಕ್ತಿಯ ಅಸ್ತಿಪಂಜರ ಪತ್ತೆಯಾಗಿದೆ. ಆತನನ್ನು ಚಂದ್ರಶೇಖರ ಕೊಲ್ಲಾಪೂರ(47) ಎಂದು ಗುರುತಿಸಲಾಗಿತ್ತು. ಇತ ಕಾಣೆಯಾಗಿದ್ದ ಎಂದು ದೂರು ದಾಖಲಾಗಿತ್ತು. ಕೋವಿಡ್ 2ನೇ(Covid) ಅಲೆಯಲ್ಲಿ ಕಾಣೆಯಾದ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಕಳೆದ ಆಗಸ್ಟ್ 14, 2024ರಂದು ಮೊಬೈಲ್ ಲೊಕೇಷನ್ ಮೇಲೆ ಮನೆಗೆ ಬಂದು ನೋಡಿದರೆ ಅಸ್ತಿಪಂಜರ ಪತ್ತೆಯಾಗಿದೆ.

ಬೆಡ್ ಪಕ್ಕದಲ್ಲಿ ಔಷಧೋಪಚಾರದ ವಸ್ತುಗಳು ಸಲಾಯಿನ್ ಪತ್ತೆಯಾಗಿತ್ತು. ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಕಿಮ್ಸ್ ಗೆ ಅಸ್ತಿಪಂಜರ ರವಾನಿಸಲಾಗಿತ್ತು. ಈಗ ನೋಡಿದರೆ ಅವನು ನನ್ನ ಮಗ, ನಮ್ಮ ಸಹೋದರವೆಂದು ಇಬ್ಬರು ಬಂದಿದ್ದಾರೆ. ಇದು ಸಹಜ ಸಾವಲ್ಲ. ಕೊಲೆ(Murder) ಎಂದು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಂದ್ರಶೇಖರ ಕೊಲ್ಲಾಪೂರ ಹೇಗೆ ಸತ್ತ? ಮನೆಯೊಳಗಿನ ಮೃತದೇಹ ಅಸ್ತಿಪಂಜರ ಆಗುವ ತನಕವೂ ಇದು ಯಾರ ಗಮನಕ್ಕೆ ಬರದೆ ಹೋಗಿದ್ದು ಹೇಗೆ? ವರ್ಷಾನುಗಟ್ಟಲೆಯಾದರೂ ಸಂಬಂಧಪಟ್ಟವರು ಈ ಮನೆ ಕಡೆ ಬರದೆ ಇರಲು ಕಾರಣವೇನು? ಈಗ ಬಂದವರು ನಿಜಕ್ಕೂ ಆತನ ತಾಯಿ, ಸಹೋದರನಾ ಅನ್ನೋದು ಸೇರಿದಂತೆ ಸಾಕಷ್ಟು ಪ್ರಶ್ನೆಗಳಿದ್ದು, ಇದೆಲ್ಲದಕ್ಕೂ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST