LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾರು ಅಪಘಾತ: ನಟ ಕಿರಣ್ ರಾಜಗೆ ಗಂಭೀರ ಗಾಯ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕಿರುತೆರೆಯ ಜೊತೆಗೆ ಹಿರಿತೆರೆಗೆ ಎಂಟ್ರಿ ಕೊಟ್ಟಿರುವ ನಟ ಕಿರಣ್ ರಾಜ್ ಕಾರು(Car Accident) ಅಪಘಾತವಾಗಿದೆ. ಇದರಿಂದಾಗಿ ಅವರ ಎದೆಗೆ ಗಂಭೀರ ಗಾಯವಾಗಿದ್ದು, ಕೆಂಗೇರಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ರಾನಿ ಚಿತ್ರದ ಕ್ಯೂಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶಗೆ ಸಣ್ಣಪುಟ್ಟ ಗಾಯಗಳಾಗಿವೆ. ಗುಟ್ಟಯ್ಯನಪಾಳ್ಯದಲ್ಲಿರುವ ನಿರಾಶ್ರಿತ ಕೇಂದ್ರಕ್ಕೆ ಹೋಗುತ್ತಿದ್ದಾಗ ಅಪಘಾತ ನಡೆದಿದೆ.

ನಟ ಕಿರಣ್(Actor Kiran Raj) ರಾಜ್ ಪ್ರತಿ ವಾರ ನಿರಾಶ್ರಿತ ಕೇಂದ್ರದಲ್ಲಿನ ಅನಾಥ ಮಕ್ಕಳಿಗೆ ಊಟ ನೀಡುತ್ತಿದ್ದರಂತೆ. ಸೆಪ್ಟೆಂಬರ್ 12ರಂದು ಅವರ ರಾನಿ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಎರಡು ದಿನಗಳ ಮುಂಚೆ ಊಟ ನೀಡಲು ಹೋಗಿದ್ದರು. ಆಗ ಅಡ್ಡ ಬಂದ ಮುಂಗುಸಿ ತಪ್ಪಿಸಲು ಹೋಗಿ ಅಪಘಾತ ನಡೆದಿದೆ. ಸೀಟು ಬೆಲ್ಟ್ ಹಾಕದೆ ಇದ್ದ ಪರಿಣಾಮ ಎದೆಗೆ ಬಾರಿ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಗಿರೀಶ್ ಸೀಟ್ ಬೆಲ್ಟ್ ಹಾಕಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST