ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ತಮಿಳು ಸ್ಟಾರ್ ನಟ, ಮುಖ್ಯಮಂತ್ರಿ ವಿಜಯ್ ಅವರ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆ ದಿನ ಸಮೀಪವಿದೆ. ಇದಕ್ಕೂ ಮೊದಲೇ ಸಿನಿಮಾ ಲೀಕ್ ಆಗಿದ್ದು, 1 ಕೋಟಿಗೂ ಹೆಚ್ಚು ಜನರು ನೋಡಿದ್ದಾರೆ ಎಂದು ಚೆನ್ನೈ ಪೊಲೀಸರು ಮದ್ರಾಸ್ ಹೈಕೋರ್ಟ್ ಗೆ ತಿಳಿಸಿದ್ದರು. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ 12 ಪ್ರಮುಖ ಬದಲಾವಣೆಗಳನ್ನು ಮಾಡಲು ಹೇಳಿತ್ತು. ಅದನ್ನು ಮುಗಿಸಿಕೊಂಡು ಈಗ ಜುಲೈ 23ರಂದು ರಿಲೀಸ್ ಆಗುತ್ತಿದೆ.
ಎಚ್.ವಿನೋತ್ ನಿರ್ದೇಶನದಲ್ಲಿ ವಿಜಯ್ ನಟನೆಯ ಕೊನೆಯ ಸಿನಿಮಾ ಜನ್ ನಾಯಗನ್ ಎಂದು ಹೇಳಲಾಗುತ್ತಿದೆ. ಸುಮಾರು 30 ದೇಶಗಳಲ್ಲಿ 7 ರಿಂದ 8 ಸಾವಿರ ಸ್ಕ್ರೀನ್ ಗಳಲ್ಲಿ ಸಿನಿಮಾ ಅಬ್ಬರಿಸಲು ಸಜ್ಜಾಗಿದೆ. ಸಿನಿಮಾ ಲೀಕ್ ಆದರೂ ದಾಖಲೆಯ ಪ್ರಮಾಣದಲ್ಲಿ ಮುಂಗಡ ಬುಕ್ಕಿಂಗ ಆಗಿದೆಯಂತೆ. ಬರೋಬ್ಬರಿ 1 ಕೋಟಿಗೂ ಹೆಚ್ಚು ಟಿಕೆಟ್ ಗಳು ಈಗಾಗ್ಲೇ ಬುಕ್ ಆಗಿವೆ ಎಂದು ತಿಳಿದು ಬಂದಿದೆ.



