LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಸರಾ ಉತ್ಸವ: ಹಣಮಂತಕುಮಾರ ಬೋರಗಿ ಗಾನ ಸಿಂಚನ

ಮೈಸೂರಲ್ಲಿ ಮೋಡಿ ಮಾಡಿದ ತಂದೆ-ಮಗಳ ಗಾಯನ

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದ ಹಣಮಂತಕುಮಾರ ಬೋರಗಿ ಅವರ ಗಾಯನ ಕಾರ್ಯಕ್ರಮ ಪ್ರೇಕ್ಷಕರಿಗೆ ಮುದ ನೀಡಿತು. ಸಂಗೀತದ ವಿವಿಧ ಪ್ರಕಾರಗಳಲ್ಲಿ ಹಾಡಿ ನೆರದಿದ್ದ ಜನರನ್ನು ರಂಜಿಸಿದರು. ಇವರ ಪುತ್ರಿ ಸಂಗೀತಾ ಬೋರಗಿ ಅವರ ವಚನ ಗಾಯನ ನಡೆಸಿಕೊಡುವ ಮೂಲಕ ಮೋಡಿ ಮಾಡಿದರು.

ಹಣಮಂತಕುಮಾರ ಬೋರಗಿ ಅವರು ಸುಗಮ ಸಂಗೀತ ಕಲಾವಿದರಾಗಿದ್ದಾರೆ. ಇವರ ತಂದೆ ದಿವಂಗತ ಭೀಮರಾಯ ಬೋರಗಿ ಅವರು ಬೈಲಾಟ ಕಲಾವಿದರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಇವರಿಗೆ ನೀಡಿ ಗೌರವಿಸಲಾಗಿದೆ. ತಾಳಿಕೋಟೆಯ ಗುರು ಖಾಸ್ಗತ ಶಿವಯೋಗಿಗಳ ಮಠದಲ್ಲಿ ಸಂಗೀತ, ಶಿಕ್ಷಣ ಕಲಿತಿದ್ದು, ಇವರ ಕುಟುಂಬ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದೆ. ರಾಯಚೂರು ಜಿಲ್ಲೆ ಲಿಂಗಸೂರಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಹಣಮಂತಕುಮಾರ ಬೋರಗಿ ಅವರು ಸುಗಮ ಸಂಗೀತದಲ್ಲಿ ಪರಿಣಿತಿ ಹೊಂದಿದ್ದಾರೆ. ಕಿತ್ತೂರು ಉತ್ಸವ, ಬೆಳವಡಿ ಉತ್ಸವ, ಚಾಲುಕ್ಯ ಉತ್ಸವದಲ್ಲಿಯೂ ಇವರ ಗಾಯನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

news_1792571295_0_470.webp

ರಾಜ್ಯಮಟ್ಟದ ಕಲಾ ಶ್ರೀ ಪ್ರಶಸ್ತಿ ಪಡೆದಿದ್ದು, ತಂದೆ ಹಾಗೂ ಮಗಳು ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಿ ತಮ್ಮ ಕಂಠಸಿರಿ ಮೂಲಕ ಸಂಗೀತ ಸುಧೆ ಹರಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಕಲಾವಿದರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಎಲ್ಲರೂ ಹಾರೈಸಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST