ಪ್ರಜಾಸ್ತ್ರ ಸುದ್ದಿ
ಗೋವಾ(Goa): ಬಹುಭಾಷಾ ಹಿರಿಯ ನಟ ನಾನಾ ಪಾಟೇಕರ್(75) ಗುರುವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ನಸುಕಿನಜಾವ 5.20ರ ಸುಮಾರಿಗೆ ತೀವ್ರ ಹೃದಯಾಘಾತವಾಗಿದೆ. 45 ನಿಮಿಷಗಳ ಕಾಲ ನಿರಂತರವಾಗಿ ಸಿಪಿಆರ್ ನಡೆಸಲಾಯಿತಾದರೂ ಪ್ರಯೋಜನವಾಗಿಲ್ಲ.
ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ. ಭಾರತದ ಶ್ರೇಷ್ಠ ನಟರ ಸಾಲಿನಲ್ಲಿ ನಾನಾ ಪಾಟೇಕರ್ ಅವರು ಒಬ್ಬರು. ತಮ್ಮದೆ ಶೈಲಿಯ ಅದ್ಭುತ ನಟನೆಯಿಂದ ಎಲ್ಲರನ್ನು ರಂಜಿಸುತ್ತಿದ್ದರು. ಹಿಂದಿ, ಮರಾಠಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ನಿಧನಕ್ಕೆ ಭಾರತೀಯ ಚಲನಚಿತ್ರ ರಂಗದ ದಿಗ್ಗಜರು ಸೇರಿದಂತೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.


