LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಮ ಎಂದರೆ ಆದರ್ಶ: ಜಾವೇದ್ ಅಖ್ತರ್

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ರಾಮ ಕೇವಲ ಒಬ್ಬ ವ್ಯಕ್ತಿ ಅಲ್ಲ. ರಾಮ ಎಂದರೆ ಆದರ್ಶ, ನೈತಿಕತೆ ಹಾಗೂ ನಮ್ಮೆಲ್ಲರ ಜೀವನಕ್ಕೂ ಒಂದು ಮಾದರಿ ಎಂದು ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮಾಯಣ ಹಾಗೂ ಸ್ವದೇಶ್ ಸಿನಿಮಾಗಾಗಿ ಬರೆದ ಪಲ್ ಪಲ್ ಹೈ ಭಾರಿ ಹಾಡಿನ ನಡುವಿನ ವ್ಯತ್ಯಾಸದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಳೆಯ ಬರಹಗಾರನಾಗಿರುವುದರಿಂದ ನಾನು ಬರೆದ ಸಾಲುಗಳು ಜನರ ಮನಸ್ಸು ತಟ್ಟಿವೆ ಎಂದರು.

ರಾಮ ಗಡಿಗಳನ್ನು ಮೀರಿದ ಪೂಜ್ಯ ವ್ಯಕ್ತಿ. ಪ್ರತಿ ಭಾರತೀಯನ ರಕ್ತದಲ್ಲಿ ರಾಮನ ಸಾರ ಹರಿಯುತ್ತಿದೆ. ರಾಮಾಯಣ ಸಿನಿಮಾ ನೋಡಿದ ನನ್ನ ಮಗಳು ಜೋಯಾ ತುಂಬಾ ಚೆನ್ನಾಗಿದೆ ಎಂದು ಮೆಚ್ಚಿಕೊಂಡಿದ್ದಾಳೆ. ಜೋಯಾ ಸಲುಭವಾಗಿ ಯಾವುದನ್ನೂ ಹೊಗಳುವುದಿಲ್ಲ. ಅಂತವಳು ಈ ಸಿನಿಮಾ ಮೆಚ್ಚಿಕೊಂಡಿದ್ದಾಳೆ ಎಂದರು. ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ನವೆಂಬರ್ 5ರಂದು ಬಿಡುಗಡೆಯಾಗಿದೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದಾರೆ. ಇದರಲ್ಲಿ ಬಹುದೊಡ್ಡ ತಾರಾಬಳಗವಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST