LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ಆರೋಗ್ಯ ಕೇಂದ್ರ ನಿರ್ಮಿಸದಿದ್ದರೆ ಮತದಾನ ಬಹಿಷ್ಕಾರ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕು, ಮೂಲಭೂತ ಸೌಕರ್ಯ ಕಲ್ಪಿಸಬೇಕು. ಇಲ್ಲದೆ ಹೋದರೆ ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಬುಧವಾರ ತಹಶೀಲ್ದಾರ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಮಾತನಾಡಿದರು.

ಸಂಘದ ತಾಲೂಕಾಧ್ಯಕ್ಷ ಬಸವರಾಜ ರಂಜುಣಗಿ ಮಾತನಾಡಿ, ಹೊನ್ನಳ್ಳಿ ಗ್ರಾಮ ಪಂಚಾಯತ್ ಬರಗಾಲ ಪೀಡಿತ ಪ್ರದೇಶವಾಗಿದೆ. ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮಪರ್ಕವಾಗಿ ಅಳವಡಿಸಿ ಊರಿನ ಜನರ ನಿರುದ್ಯೋಗ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು. ಆರೋಗ್ಯ ಕೇಂದ್ರ ನಿರ್ಮಿಸಬೇಕು. ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಯನ್ನು ಮಾಡಬೇಕು. ಇಲ್ಲದಿದ್ದರೆ ಇಡೀ ಊರಿನ ಜನರು ಮುಂದೆ ಬರುವ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕರಿಸಿ ಮತದಾನದಿಂದ ದೂರ ಉಳಿಯುತ್ತೇವೆ ಎಂದು ಹೇಳಿದರು. 

ಸಂಘದ ಗೋಲಗೇರಿ ವಲಯದ ಉಪಾಧ್ಯಕ್ಷ ಅಂಬರೀಶ ಡಿಗ್ಗಿ ಮಾತನಾಡಿ, ಸಿಂದಗಿ ತಾಲೂಕಿನ ಕಟ್ಟ ಕಡೆಯ ಹಳ್ಳಿಗಳಾದ ಹೊನ್ನಳ್ಳಿ, ಬ್ರಹ್ಮದೇವನಮಡು ಗ್ರಾಮಸ್ಥರಾದ ನಾವು ಮುಂದೆ ಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ಮಾಡಿದ್ದೇವೆ. ಕಾರಣ ಸ್ವತಂತ್ರ ಬಂದು ಎಂಟು ದಶಕಗಳು ಕಳೆದರೂ ಕೂಡ ಹಳ್ಳಿಗಳು ಮೂಲಭೂತ ಸೌಕರ್ಯಗಳ ಕೊರತೆ ಹೊಂದಿವೆ. ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ಹಿಂದೆ ಉಳಿದಿವೆ. ಗ್ರಾಮದಲ್ಲಿ ಮುಖ್ಯವಾಗಿ ಆಸ್ಪತ್ರೆಯ ಕೊರತೆ ಇದ್ದು, ಹಳ್ಳಿಗಳ ಜನರಿಗೆ ಬಹಳ ತೊಂದರೆ ಇದೆ. ರೋಗ ರುಜಿನಗಳಿಗೆ ತೊಂದರೆಯಾದರೆ ದೂರದ ಗೋಲಗೇರಿ, ಸಿಂದಗಿ ಆಸ್ಪತ್ರೆಗಳಿಗೆ ತೆರಳಬೇಕಾಗಿದೆ. ರಸ್ತೆಗಳು ಸರಿಯಿಲ್ಲ ಹಾಗೂ ದೂರದ ಊರುಗಳಿಗೆ ತೆರಳಲು ಬಡ ಜನರಿಗೆ ಬಹಳ ತೊಂದರೆಯಾಗುತ್ತಿದೆ. ಕಾರಣ ಹೊನ್ನಳ್ಳಿ ಗ್ರಾಮ ಪಂಚಾಯತ್ ವ್ಯಕ್ತಿಯಲ್ಲಿ ಸರ್ಕಾರಿ ಆಸ್ಪತ್ರೆಯ ಅವಶ್ಯಕತೆ ಇದ್ದು, ಊರಿಗೆ ಆಸ್ಪತ್ರೆ ನಿರ್ಮಿಸಬೇಕು ಎಂದರು.

ಹೊನ್ನಳ್ಳಿ ರೈತ ಘಟಕದ ಅಧ್ಯಕ್ಕ ಸಂತೋಷ ಶಿರಸಿಗಿ ಮಾತನಾಡಿ, ಕೂಡಲೇ ಗ್ರಾಮದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕು. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಈ ವೇಳೆ ಏಕನಾಥ ದಾಶ್ಯಳ, ಪರಶು ದೊಡಮನಿ, ರಮೇಶ ಕುದುರಗೊಂಡ, ಮುಖೇಶ ಬಡಿಗೇರ, ಬಸವರಾಜ ಕಟ್ಟಿಮನಿ, ಗೋಲಗೇರಿ ವಲಯ ಅಧ್ಯಕ್ಷ ಶಬ್ಬೀರ್ ನಾಯ್ಕೋಡಿ, ಉಪಾಧ್ಯಕ್ಷ ಖಾದರ್ ಭಾಷಾ ಉಸ್ತಾದ, ರಾಜಶೇಖರ  ಖ್ಯಾಡ, ಭೀಮರಾಯ ಕ್ಯಾದಿಗೇರಿ, ಪ್ರದೀಪ ಖ್ಯಾಡ, ರಮೇಶ ತಿಪನಟಗಿ, ಅಣ್ಣಪ್ಪ ತಿಪನಟಗಿ, ರಾಜು ಕಂಬಾರ, ಹಣಮಂತ ಛಲವಾದಿ, ರೇವಣಸಿದ್ಧ ರತ್ಯಾಳ, ಆನಂದ ಕೂಡಗಿ, ರಮೇಶ ಬಮ್ಮನಳ್ಳಿ, ರಾಜಶೇಖರ ಶಿರಸಗಿ, ನಬಿರಸೂಲ್ ಬಾಗೇವಾಡಿ, ಭೀಮು ಛಲವಾದಿ, ಬಾಗಣ್ಣ ಅಲ್ಲಾಪೂರ ಇದ್ದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST