LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

RSS ವಿರುದ್ಧ ವಿಷ ಕಾರುವುದೇ ಕೆಲವರಿಗೆ ತೆವಲು: ಬಿ.ವೈ.ವಿಜಯೇಂದ್ರ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ಆರ್ ಎಸ್ಎಸ್ ನಲ್ಲಿ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ರವಿ ಹಂಜ್ ಬರೆದಿರುವ ಪುಸ್ತಕದ ಕುರಿತು ಎದ್ದಿರುವ ವಿವಾದ ಸಂಬಂಧ ಆರ್ ಎಸ್ಎಸ್ ವಿರುದ್ಧ ಕೇಳಿ ಬರುತ್ತಿರುವ ಹೇಳಿಕೆಗಳ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಬಸವ ಮಂಟಪ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ ಬಸವ ವಿರೋಧಿ ನೀಚ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡ ರವಿ ಹಂಜ್ ವ್ಯಕ್ತಿಯೊಂದಿಗೆ ಕೆಲವು ಪಟ್ಟಭದ್ರಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

ಜಾತಿ, ಪ್ರಾಂತಿಯತೆ, ಭಾಷೆಗಳ ಎಲ್ಲೆ ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳನ್ನು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೆ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರ ಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾತ್ರ.

ಇವನಾರವ, ಇವನಾರವ ಎನ್ನದೆ, ಇಮ್ಮವ ಇವ ನಮ್ಮವ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ ಆರ್ ಎಸ್ಎಸ್ ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ. ಅವಕಾಶ ಸಿಕ್ಕಾಗಲೆಲ್ಲ ಆರ್ ಎಸ್ಎಸ್ ವಿರುದ್ಧ ವಿಷ ಕಾರುವುದೇ ಕೆಲವರಿಗೆ ತೆವಲು. ಬೆಂದ ಮನೆಯಲ್ಲಿ ಗಳ ಇರಿದುಕೊಳ್ಳುವ ಬುದ್ದಿ. ರವಿ ಹಂಜ್ ಪುಸ್ತಕ ಇಂತವರಿಗೀಗ ಸರಕಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬಿ.ವೈ.ವಿಜಯೇಂದ್ರ ಬರೆದಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST