LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆತ್ಮಸಾಕ್ಷಿಯಿಟ್ಟುಕೊಂಡು ಕೆಲಸ ಮಾಡಿ: ನಟ ಶಿವರಾಜಕುಮಾರ್

ಪ್ರಜಾಸ್ತ್ರ ಸುದ್ದಿ

ನಟಿಯರ ಫೋಟೋ ಹಾಗೂ ವಿಡಿಯೋಗಳನ್ನು ಅಸಭ್ಯವಾಗಿ ಸೆರೆಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲ ಪಾಪರಾಜಿಗಳು ಪೋಸ್ಟ್ ಮಾಡುತ್ತಿರುವುದು ಹೆಚ್ಚಾಗಿರುವ ಬಗ್ಗೆ ನಟಿ ಸಪ್ತಮಿಗೌಡ ಧ್ವನಿ ಎತ್ತಿದ್ದು, ಇದಕ್ಕೆ ನಟ ಶಿವರಾಜಕುಮಾರ್ ಸೇರಿದಂತೆ ಅನೇಕ ನಟ, ನಟಿಯರು ಧ್ವನಿಗೂಡಿಸಿದ್ದಾರೆ.

ಈ ಕಾಲದಲ್ಲಿಯೂ ಹೆಣ್ಮಕ್ಕಳನ್ನೂ ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ. ದಯವಿಟ್ಟು ಆತ್ಮಸಾಕ್ಷಿಯಿಟ್ಟುಕೊಂಡು ಕೆಲಸ ಮಾಡಿ. ಹೆಣ್ಮಕ್ಕಳ, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದು ನಟ ಶಿವರಾಜಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇವರಂತೆ ನಟಿಯರಾದ ರಕ್ಷಿತಾ ಪ್ರೇಮ್, ರಮ್ಯಾ, ಸಂಜನಾ ಆನಂದ್, ಆಶಿಕಾ ರಂಗನಾಥ್, ಚೈತ್ರಾ ಆಚಾರ್, ಯುವರಾಜಕುಮಾರ್ ಸೇರಿದಂತೆ ಹಲವರು ಸಹ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST