ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಸಾಲ ಕೊಟ್ಟ ವ್ಯಕ್ತಿ ಹಣ ಕೇಳಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಎಂಎಲ್ ಸಿ ಹೆಚ್.ವಿಶ್ವನಾಥ್ ವಿರುದ್ಧ ನ್ಯಾಯಾಲಯದ ಆದೇಶದ ಮೇರೆಗೆ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೊದಲು ಎನ್ ಸಿಆರ್ ದಾಖಲಿಸಲಾಗಿತ್ತು. ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗಿದೆ.
2013ರಲ್ಲಿ ಹೆಚ್.ವಿಶ್ವನಾಥ್ ಅವರು ಸಂಸದರಾಗಿದ್ದ ವೇಳೆ ಎಂಟಿಬಿ ನಾಗರಾಜ್ ಮೂಲಕ ಅವರಿಗೆ ಹಾಗೂ ಮಗ ಅಮಿತ್ ದೇವರಹಟ್ಟಿಗೆ 55 ಲಕ್ಷ ರೂಪಾಯಿ ನೀಡಿದ್ದೆ ಎಂದು ಕಾಂಗ್ರೆಸ್ ಮುಖಂಡರ ಕೋಟೆಹುಂಡಿ ಮಹದೇವ್ ಅವರು ಹೇಳಿದ್ದಾರೆ. ಫೆಬ್ರವರಿ 21ರಂದು ಜಲದರ್ಶನಿ ಅತಿಥಿಗೃಹದಲ್ಲಿದ್ದಾಗ ಹಣ ಕೇಳಲು ಹೋಗಿದ್ದಾಗ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ.



