LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಎಂ ಸಂಬಂಧಿ ಎಂದು ಹೇಳಿ ಸೆಕ್ಯೂರಿಟಿಗಾರ್ಡ್ ಮೇಲೆ ಹಲ್ಲೆ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನಾನು ಸಿಎಂ ಸಿದ್ದರಾಮಯ್ಯ(Siddaramaiah) ಸಂಬಂಧಿ, ನಮ್ಮ ತಂದೆ ಡಿಸಿಪಿ ಎಂದು ಹೇಳಿ ಯುವಕನೊಬ್ಬ ಅಪಾರ್ಟ್ ಮೆಂಟ್ ಸೆಕ್ಯೂರಿಟಿಗಾರ್ಡ್ ಮೇಲೆ ಹಲ್ಲೆ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಹಲ್ಲೆ(Assault) ಮಾಡಿದ ಯುವಕನ ಹೆಸರು ವರಣ್ ಎಂದು ತಿಳಿದು ಬಂದಿದೆ. ಪುನೀತ್ ಹಲ್ಲೆಗೆ ಒಳಗಾದ ಸೆಕ್ಯೂರಿಟಿಗಾರ್ಡ್. ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಘಟನೆ ಹಿನ್ನಲೆ ಏನು?:  ಕುಂಬಳಗೋಡು ಹತ್ತಿರದ ಪ್ರಾವಿಡೆಂಟ್ ಸನ್ ವರ್ತ್ ಅಪಾರ್ಟ್ ಮೆಂಟ್ ಗೆ ಕಳೆದ ರಾತ್ರಿ ಸುಮಾರು 12 ಗಂಟೆಗೆ ಯವಕ ವರುಣ್ ಇಬ್ಬರು ಹುಡುಗಿಯರೊಂದಿಗೆ ಬಂದಿದ್ದಾನಂತೆ. ಸೆಕ್ಯೂರಿಟಿಗಾರ್ಡ್ ಪುನೀತ್ ತಡೆದು, ಅಪರಿಚಿತರನ್ನು ಇಷ್ಟು ಹೊತ್ತಿನಲ್ಲಿ ಒಳಗೆ ಬಿಡುವುದಿಲ್ಲ ಎಂದು ಹೇಳಿದ್ದಾನೆ. ಇದರಿಂದ ಸಿಟ್ಟಾದ ಯುವಕ ಆತನೊಂದಿಗೆ ಜಗಳವಾಡಿದ್ದಾನೆ. ನಾನು ಡಿಸಿಎಂ(DCP) ಮಗ ಎಂದು ಆವಾಜ್ ಹಾಕಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಸೆಕ್ಯೂರಿಟಿಗಾರ್ಡ್(Security Guard) ಎರಡೂ ಕಿವಿಗಳಿಗೂ ಹಾನಿಯಾಗಿದ್ದು ಸರಿಯಾಗಿ ಕೇಳಿಸುತ್ತಿಲ್ಲವೆಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸ್ ತನಿಖೆ ನಡೆದಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST