LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಟ್ಕಳ: ಕಪ್ಪೆ ಚಿಪ್ಪು ಆರಿಸಲು ಹೋದ 8 ಜನರ ಸಾವು

ಇಬ್ಬರು ಪಾರು, ಕೆಲವರು ಕಣ್ಮರೆ ಶಂಕೆ…

ಪ್ರಜಾಸ್ತ್ರ ಸುದ್ದಿ

ಭಟ್ಕಳ(Bhatkal): ಕಪ್ಪೆಚಿಪ್ಪು ಆರಿಸಲು ಹೋದ 7 ಮಹಿಳೆಯರು ಸೇರಿ 8 ಜನರು ನೀರಲ್ಲಿ ಮುಳುಗಿ ಮೃತಪಟ್ಟಿರುವ ದುರಂತವೊಂದು ತಾಲೂಕಿನ ಶಿರಾಲಿಯ ಅಳ್ವೆಕೋಡಿ ಹತ್ತಿರ ಭಾನುವಾರ ನಡೆದಿದೆ. ತಟ್ಟಿಹಕ್ಕಲ ಕಳಿನಟ್ಟಿ ನದಿಗೆ ಇಳಿದಿದ್ದಾರೆ. ಆದರೆ, ಕಳೆದ ರಾತ್ರಿ ಭಾರಿ ಮಳೆಯಾಗಿದ್ದರಿಂದ ನೀರು ಹೆಚ್ಚಾಗಿತ್ತು. ಅಲ್ಲದೆ ಸಮುದ್ರದ ಅಲೆಗಳಿಂದಾಗಿ ನೀರಿನ ಮಟ್ಟ ಸಹ ಏರಿಕೆಯಾಗಿದೆ. ಹೀಗಾಗಿ 8 ಜನರು ಮುಳುಗಿರುವ ಶಂಕೆ ವ್ಯಕ್ತವಾಗಿದೆ.

ಉಮೇಶ ನಾಯ್ಕ(30), ಲಕ್ಷ್ಮಿ ಮಹಾದೇವ ನಾಯ್ಕ(42), ಮಾಲತಿ ಜಟ್ಟಪ್ಪ ನಾಯ್ಕ(38), ಲಕ್ಷ್ಮಿ ಶಿವರಾಮ ನಾಯ್ಕ(49), ಜ್ಯೋತಿ ನಾಗಪ್ಪ ನಾಯ್ಕ(34), ಲಕ್ಷ್ಮಿ ನಾಯ್ಕ(30), ಮಾಸ್ತಮ್ಮ ಮಂಜುನಾಥ ನಾಯ್ಕ, ಲಕ್ಷ್ಮಿ ಅಣ್ಣಪ್ಪ ನಾಯ್ಕ(60) ಮೃತರೆಂದು ತಿಳಿದು ಬಂದಿದೆ. ಅಳ್ವೆಕೋಡಿಯಲ್ಲಿ ಇವರ ಮೃತದೇಹಗಳು ಪತ್ತೆಯಾಗಿವೆ. ಇನ್ನು ಕೆಲವರು ಕಣ್ಮರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಾಗರತ್ನ ಹಾಗೂ ಮಹಾದೇವಿ ಅನ್ನೋ ಇಬ್ಬರು ಪಾರಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಒಂದೇ ಕುಟುಂಬದ 12 ಜನರು ಕಪ್ಪೆಚಿಪ್ಪು ಆರಿಸಲು ಹೋಗಿದ್ದರಂತೆ. ಉಳಿದವರ ಪತ್ತೆ ಕಾರ್ಯ ನಡೆದಿದೆ. ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಭಟ್ಕಳ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST