LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿ.ಕೆ ಹರಿಪ್ರಸಾದ ಕೆಪಿಸಿಸಿ ನೂತನ ಸಾರಥಿ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಬುಧವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಸಾರಥಿಯನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ. ಹುದ್ದೆಗೆ ಸತೀಶ ಜಾರಿಕಿಹೊಳಿ ರೇಸಿನಲ್ಲಿದ್ದಾರೆ. ಅವರ ಬೇಡಿಕೆಯೂ ಇದೆ ಎನ್ನಲಾಗುತ್ತಿತ್ತು. ಎಲ್ಲ ಊಹೆಗಳ ನಡುವೆ ಬಿ.ಕೆ ಹರಿಪ್ರಸಾದ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಬೇಕು ಅನ್ನೋ ಬಯಕೆ ಇತ್ತು. ಆಗಿರಲಿಲ್ಲ. ಈಗ್ಲಾದರೂ ಸಚಿವರಬೇಕು ಎನ್ನುತ್ತಿದ್ದಾರೆ. ಆದರೆ, ಸೋನಿಯಾ ಗಾಂಧಿ ಬಿ.ಕೆ ಹರಿಪ್ರಸಾದ ಮನವೊಲಿಸಿ ಕೆಪಿಸಿಸಿ ಅಧ್ಯಕ್ಷರಾಗಲು ಒಪ್ಪಿಸಿದ್ದಾರೆಂದು ಹೇಳಲಾಗುತ್ತಿದೆ. ಈ ಹಿಂದೆ 19 ರಾಜ್ಯಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಹರಿಯಾಣದ ಉಸ್ತುವಾರಿಯಿದ್ದಾರೆ. ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಸದ್ಯ ಪರಿಷತ್ ಸದಸ್ಯರಾಗಿದ್ದು, ಜೂನ್ 30ಕ್ಕೆ ಅವಧಿ ಮುಗಿಯಲಿದೆ. ಮತ್ತೊಮ್ಮೆ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧವಾಗಿದೆ.

ಈಡಿಗ ಸಮುದಾಯದ ಬಿ.ಕೆ ಹರಿಪ್ರಾಸದ ಕಾಂಗ್ರೆಸ್ ಪಕ್ಷದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ಧ ವೇಳೆ ವಿವಿಧ ಪ್ರಾಧಿಕಾರ, ಸಮಿತಿಗಳ ಸದಸ್ಯರು, ಮಂಡಳಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಆದರೆ, ಸಚಿವರಾಗಿಲ್ಲ. ಪ್ರಬಲ ಒಕ್ಕಿಲಗ ಸಮುದಾಯದ ಡಿ.ಕೆ ಶಿವಕುಮಾರಗೆ ಸಿಎಂ ಸ್ಥಾನ ನೀಡಲಾಗಿದೆ. ಅವರಿಂದ ಬಿಜೆಪಿ, ಆರ್ ಎಸ್ಎಸ್ ಸಿದ್ಧಾತಗಳನ್ನು ತೀವ್ರವಾಗಿ ವಿರೋಧಿಸುವುದು ಸಾಧ್ಯವಿಲ್ಲ. ಸಿದ್ದರಾಮಯ್ಯರಂತೆ ನೇರಾನೇರವಾಗಿ ವಾಗ್ದಾಳಿ ನಡೆಸುವವರಲ್ಲಿ ಬಿ.ಕೆ ಹರಿಪ್ರಸಾದ ಸಹ ಒಬ್ಬರು. ಹೀಗಾಗಿ ವಿಪಕ್ಷದ ವಿರುದ್ಧದ ಹೋರಾಟಕ್ಕೆ ಇವರು ಸೂಕ್ತವೆಂದು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ ಎಂದು ಹೇಳಲಾಗುತ್ತಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST