ಪ್ರಜಾಸ್ತ್ರ ಸುದ್ದಿ
ಚಿತ್ತಾಪುರ(Chittapura): ಕ್ರೂಸರ್ ಹಾಗೂ ಟ್ಯಾಂಕರ್ ನಡುವೆ ಶನಿವಾರ ನಸುಕಿನಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಹಾಗೂ ಹಲಕರ್ಟಿ ನಡುವೆ ಈ ಭೀಕರ ಅಪಘಾತ ನಡೆದಿದೆ. ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಾಡಿಯಿಂದ ಯಾದಗಿರಿ ಕಡೆ ಹೊರಟಿದ್ದ ಟ್ಯಾಂಕರ್ ಹಾಗೂ ಯಾದಗಿರಿಯಿಂದ ಇಂಗಳಗಿಗೆ ಹೊರಟಿದ್ದ ಕ್ರೂಸರ್ ನಡುವೆ ಅಪಘಾತವಾಗಿದೆ. ಮಹಿಬೂಬ್ ಅಲಿ(42), ಫಾತಿಮಾ(40), ರಸೂಲಬಿ(43), ಹುಸೇನ್ ಶಹಾಪುರ(47) ಹಾಗೂ ತೊಲಾ ಬಾಷಾ(30) ಮೃತ ದುರ್ದೈವಿಗಳು. ಇವರೆಲ್ಲರು ಸಂಬಂಧಿಕರು ಎಂದು ತಿಳಿದು ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ ಸೂಚಿಸಿದ್ದಾರೆ. ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದು, ಅಗತ್ಯ ನೆರವು ನೀಡುವ ನೀಡಲಾಗುವುದು ಎಂದಿದ್ದಾರೆ.



