LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದರ್ಶನ್ ಯಾವತ್ತಿದ್ದರೂ ನನ್ನ ಮಗನೆ: ಸುಮಲತಾ ಅಂಬರೀಶ್

ಪ್ರಜಾಸ್ತ್ರ ಸುದ್ದಿ

ಮಂಡ್ಯ(Mandaya): ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಈಗ ಮಧ್ಯಂತರ ಜಾಮೀನು ಮೇಲೆ ಹೊರಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್(Sumalatha Ambareesh) ಅವರು, ನಾನು ಯಾವತ್ತಿದ್ದರೂ ದರ್ಶನ್ ಪರ. ಅವನು ಯಾವತ್ತಿದ್ದರೂ ನನ್ನ ಮಗನೆ. ತಾಯಿ ಸ್ಥಾನದಲ್ಲಿ ನಿಂತು ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಇದನ್ನು ನಾನು ಮಾಧ್ಯಮದಲ್ಲಿ ಬಂದು ಹೇಳಬೇಕಾಗಿಲ್ಲ. ಆರೋಗ್ಯ ಸಮಸ್ಯೆ, ಕಾನೂನು ಸವಾಲು ಎದುರಿಸುತ್ತಿದ್ದಾರೆ. ಆರೋಗ್ಯ ಸುಧಾರಿಸಲಿ, ನಿರಪರಾಧಿ ಎಂದು ಆಚೆ ಬರಲಿ ಎಂದರು.

ಸರ್ಜರಿ ಮಾಡಿಸಿದರೆ ಪೂರ್ತಿಗುಣವಾಗಲು ತುಂಬ ಸಮಯ ಬೇಕು. ಈಗಾಗ್ಲೇ ಕೆಲ ಸಿನಿಮಾಗಳು ಅರ್ಧಕ್ಕೆ ನಿಂತಿವೆ. ಚಿತ್ರರಂಗಕ್ಕೂ ಇದರಿಂದ ದೊಡ್ಡ ಹೊಡೆತ ಬಿದ್ದಿದೆ. ಕಳೆದ ವರ್ಷ ಕಾಟೇರ ಸಿನಿಮಾ ದೊಡ್ಡ ಯಶಸ್ಸು ತಂದಿದೆ. ಆದರೆ, ಈ ವಿಚಾರದಲ್ಲಿ ಎಲ್ಲರಿಗೂ ನೋವಾಗಿದೆ. ಕೋರ್ಟ್ ನಲ್ಲಿ ಸತ್ಯಾಂಶ ತಿಳಿದು ಬೇಗ ಹೊರಗೆ ಬರಲಿ. ಇನ್ನು ನನ್ನ ರಾಜಕೀಯ ಜೀವನ ಇರುವುದು ಮಂಡ್ಯದಲ್ಲಿಯೇ. ಮೈತ್ರಿ ಕಾರಣಕ್ಕೆ ಕ್ಷೇತ್ರ ಬಿಟ್ಟುಕೊಡಿ ಎಂದು ಪ್ರಧಾನಿ ಮೋದಿಯವರು ಕೇಳಿದ್ದರು. ಅವರ ಮಾತಿಗೆ ಗೌರವ ಕೊಟ್ಟು ಬಿಟ್ಟುಕೊಟ್ಟೆ. ಜನವರಿಂದ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಅಂತಾ ಹೇಳಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST