LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಶ್ರೀಶೈಲಗೌಡ ಬಿರಾದಾರ

ಫಾರ್ಮ್‌ಹೌಸ್‌ನಲ್ಲಿ ಪರಿಸರ ದಿನ ಆಚರಣೆ..

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ವಿಶ್ವ ಪರಿಸರ ದಿನವನ್ನು ಪವಿತ್ರ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಕರ್ತವ್ಯವೆಂದು ಕರೆ ಕೊಟ್ಟಿದ್ದಾರೆ ಎಂದು ಸಿಂದಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀಶೈಲಗೌಡ ಬಿರಾದಾರ ಅವರು ಹೇಳಿದರು. ಪರಿಸರ ದಿನದ ಹಿನ್ನಲೆಯಲ್ಲಿ ತಮ್ಮ ಫಾರ್ಮ್‌ಹೌಸ್‌ನಲ್ಲಿ ಪರಿಸರದ ದೇವರೆಂದೇ ಕರೆಯಲ್ಪಡುವ 'ಆಲದ ಮರ'ವನ್ನು ನೆಟ್ಟು ನೀರುಣಿಸಿದರು.

ನಮ್ಮ ಪ್ರಧಾನಿ ಮೋದಿಯವರು "ಏಕ್ ಪೇಡ್ ಮಾ ಕೆ ನಾಮ್" ಅಭಿಯಾನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪ್ರಕೃತಿಯನ್ನು ರಕ್ಷಿಸುವಂತೆ ಕರೆ ನೀಡಿದ್ದಾರೆ. ಅವರ ದೂರದರ್ಶಿತ್ವದ ಕರೆ ನಮಗೆ ಕೇವಲ ಮಾತಲ್ಲ, ಅದೊಂದು ನಮ್ಮ ಕರ್ತವ್ಯ. ನಮ್ಮ ಭಾರತೀಯ ಜನತಾ ಪಾರ್ಟಿ ಕೇವಲ ರಾಜಕೀಯ ಮಾಡುವ ಪಕ್ಷವಲ್ಲ. ಇದು ದೇಶದ ಸಂಸ್ಕೃತಿ, ವಿಕಾಸ ಮತ್ತು ಪ್ರಕೃತಿಯನ್ನು ಆರಾಧಿಸುವ ಪಕ್ಷ. ಪ್ರಧಾನಿ ಮೋದಿಯವರು ಜಾಗತಿಕ ಮಟ್ಟದಲ್ಲಿ ಭಾರತವನ್ನು ಪರಿಸರ ಸಂರಕ್ಷಣೆಯ ನಾಯಕನನ್ನಾಗಿ ಮಾಡಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿಯೇ ಇಂದು ನಾವು ಸುದೀರ್ಘ ಆಯಸ್ಸು ಮತ್ತು ಅಪಾರ ಆಮ್ಲಜನಕ ಕೊಡುವ ಆಲದ ಮರವನ್ನು ಆಯ್ಕೆ ಮಾಡಿಕೊಂಡು ನೆಟ್ಟಿದ್ದೇವೆ ಎಂದು ಹೇಳಿದರು.

ನಮ್ಮ ಸಿಂದಗಿ ಮತಕ್ಷೇತ್ರವು ಕೃಷಿ ಪ್ರಧಾನವಾದ ಭೂಮಿ. ಇಲ್ಲಿನ ರೈತರು, ಯುವಕರು ಮತ್ತು ಸಾರ್ವಜನಿಕರು ಪರಿಸರದ ಮಹತ್ವವನ್ನು ಚೆನ್ನಾಗಿ ಬಲ್ಲರು. ಪ್ರಕೃತಿಯ ಸಮತೋಲನ ತಪ್ಪಿದರೆ ಮಳೆ-ಬೆಳೆ ಎಲ್ಲವೂ ಏರುಪೇರಾಗುತ್ತದೆ. ಹೀಗಾಗಿ, ಸಿಂದಗಿ ಕ್ಷೇತ್ರವನ್ನು ಹಸಿರುಮಯವಾಗಿಸುವುದು ಮತ್ತು ಇಲ್ಲಿನ ಪರಿಸರವನ್ನು ಉತ್ತಮಪಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಬನ್ನಿ, ನಾವೆಲ್ಲರೂ ಸೇರಿ ನಮ್ಮ ಸಿಂದಗಿ ಕ್ಷೇತ್ರವನ್ನು ಹಸಿರು ಕ್ಷೇತ್ರವನ್ನಾಗಿ ಮಾಡೋಣ. ಪ್ರತಿಯೊಬ್ಬರೂ ತಮ್ಮ ಮನೆ, ಹೊಲ ಅಥವಾ ಖಾಲಿ ಜಾಗಗಳಲ್ಲಿ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಪೋಷಿಸೋಣ ಎಂದು ಈ ಮೂಲಕ ವಿನಂತಿಸುತ್ತೇನೆ. ಪ್ರಧಾನಿ ಮೋದಿಯವರ ಹಸಿರು ಭಾರತದ ಸಂಕಲ್ಪವನ್ನು ಹಾಗೂ ಸ್ವಚ್ಛ ಮತ್ತು ಹಸಿರು ಭಾರತದ ಕನಸನ್ನು ನನಸು ಮಾಡೋಣ ಎಂದು ಮತಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಂಡರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST