ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರ 94ನೇ ಹುಟ್ಟು ಹಬ್ಬದ ನಿಮಿತ್ತ, ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಹಣ್ಣುಹಂಪಲ ವಿತರಣೆ ಮಾಡಲಾಯಿತು. ಯುವ ಜನತಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬಿರಾದಾರ ನೇತೃತ್ವದಲ್ಲಿ ಸಿಂದಗಿ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣುಹಂಪಲ ವಿತರಿಸಲಾಯಿತು.
ಈ ವೇಳೆ ಆಲಮೇಲ ತಾಲೂಕ ಅಧ್ಯಕ್ಷ ಮೊಹ್ಮದ್ ಉಸ್ತಾದ, ಆಲಮೇಲ ತಾಲೂಕ ಯುವ ಘಟಕ ಅಧ್ಯಕ್ಷ ಪ್ರದೀಪ ನಾಯ್ಕೋಡಿ. ಹುಸೇನ ತಾಂಬೋಳಿ, ಭೀಮಾಶಂಕರ ರತ್ನಾಕರ ಸಿಂದಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



