ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೋಲಾರದ ಮಾಜಿ ಶಾಸಕ ಹಾಗೂ ವಕೀಲರಾದ ಕೆ.ಆರ್ ಶ್ರೀನಿವಾಸಯ್ಯ(94) ಅವರು ಶುಕ್ರವಾರ ನಿಧನರಾಗಿದ್ದಾರೆ. ಕೋಲಾರ ತಾಲೂಕಿನ ಈಕಂಬಳ್ಳಿ ಗ್ರಾಮದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ. ಪತ್ನಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ.
1983 ಹಾಗೂ 85ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದರು. ಜನತಾ ಪರಿವಾರದ ನಾಯಕರಾಗಿದ್ದರು. ರಾಮಕೃಷ್ಣ ಹೆಗಡೆ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. 1983ರಲ್ಲಿ ಕಾಂಗ್ರೆಸ್ ನ ನಸೀರ್ ಅಹ್ಮದ್, 1985ರಲ್ಲಿ ಕಾಂಗ್ರೆಸ್ಸಿನ ಅಬ್ದುಲ್ ರಹೀಮ್ ವಿರುದ್ಧ ಜಯ ಸಾಧಿಸಿದ್ದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕೆ.ಎ ನಿಸಾರ್ ಅಹ್ಮದ್ ವಿರುದ್ಧ ಸೋಲು ಅನುಭವಿಸಿದರು.



