LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೋಮವಾರ ದರ್ಶನಗೆ ಜಾಮೀನು ಸಿಗುತ್ತಾ..?

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಕಳೆದ 100 ದಿನಗಳಿಗಿಂತ ಹೆಚ್ಚು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್(Actor Darshan) ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಸೋಮವಾರ ನಡೆಯಲಿದೆ. 57ನೇ ಸಿಸಿಎಚ್(CCH Court) ಕೋರ್ಟ್ ಗೆ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಪ್ರಾಸಿಕ್ಯೂಷನ್ ಗೆ ನೋಟಿಸಿದ್ದು, ಸೋಮವಾರ ವಿಚಾರಣೆಗೆ ಬರಲಿದೆ. ಹೀಗಾಗಿ ಎಲ್ಲರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.

ಕೊಲೆ ಪ್ರಕರಣಕ್ಕೆ(Murder Case) ಸಂಬಂಧಿಸಿದಂತೆ ಬರೋಬ್ಬರಿ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಇನ್ನು ಕೆಲವೊಂದಿಷ್ಟು ಟೆಕ್ನಿಕಲ್ ಸಾಕ್ಷಿಗಳು ಬರಬೇಕಿದ್ದು, ಅದನ್ನು ಮುಂದೆ ಕೋರ್ಟ್ ಗೆ ಸಲ್ಲಿಸಲಾಗುವುದು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಈಗ ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ಅನ್ನು ದರ್ಶನ್ ಸೇರಿ ಎಲ್ಲ 17 ಆರೋಪಿಗಳಿಗೆ ನೀಡಲಾಗಿದೆ. ಅವರ ಪರ ವಕೀಲರು ಅದನ್ನು ಓದಿದ್ದಾರೆ. ಹೀಗಾಗಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿ 18 ದಿನಗಳ ಬಳಿಕ ನಟ ದರ್ಶನ್ ಪರ ವಕೀಲರ ಮೊದಲ ಬಾರಿಗೆ ಜಾಮೀನಿಗೆ(Bail) ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಯಾವ ಅಂಶಗಳ ಮೇಲೆ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ವಕೀಲರು ಕೇಳುತ್ತಾರೆ ಅನ್ನೋ ಕುತೂಹಲ ಡಿ ಬಾಸ್(D Boss) ಫ್ಯಾನ್ಸ್ ಸೇರಿ ಎಲ್ಲರಲ್ಲೂ ಮೂಡಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST