LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ಓತಿಹಾಳದಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಓತಿಹಾಳ ಪಿಕೆಪಿಎಸ್ ಸಂಘದಲ್ಲಿನ ಹಣ ದುರುಪಯೋಗ ಮಾಡಿಕೊಂಡು ಇಲಾಖೆಯಿಂದ ಸಾಬೀತಾಗಿ ವಜಾಗೊಂಡ ಮಾಜಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಂಬಣ್ಣ ಹೂಗಾರ ಅವರನ್ನು ಮತ್ತೆ ನೇಮಕ ಮಾಡಿಕೊಂಡ ಈಗಿನ ಆಡಳಿತ ಮಂಡಳಿಯವರು ಇವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ, ಸಂಘದ ಆವರಣದಲ್ಲಿ ಅನಿರ್ಧಿಷ್ಠಾವದಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಬಾಬು ನಾಟೀಕಾರ ಅವರು, ಕಾನೂನು ಬಾಹಿರವಾಗಿ ನೇಮಕ ಮಾಡಿಕೊಂಡ ವ್ಯವಸ್ಥೆಯ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಬೇಕು. ಇಲಾಖೆ ನಮ್ಮ ಧರಣಿ ಸತ್ಯಾಗ್ರಹಕ್ಕೆ ಒಗೊಟ್ಟು ಕಾನೂನಾತ್ಮಕವಾಗಿ ಸೂಕ್ತ ನ್ಯಾಯವನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವೇಳೆ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ ಮಣೂರ, ಸೋಮಣ್ಣ ಪೂಜಾರಿ, ಭೀಮರಾಐ ಮಕಣಾಪೂರ, ನೀಲಮ್ಮ ನಾಕೆತ್ತಿನ, ಸಂಗಮ ಕೊರಬು, ಸಿದ್ದಮ್ಮ ನಾಟೀಕಾರ, ಗ್ರಾಮ ಪಂಚಾಯತ್ ಸದಸ್ಯರಾದ ಸುವರ್ಣಾ ಮಕಣಾಪೂರ, ಜಗದೀಶ ಮಾಲೇಗಾರ, ಮಲ್ಲು ನಾಕೆತ್ತಿನ, ಆಸೀಫ್ ಗುಂಜಟ್ಟಿ, ರಾಜು ವಠಾರ, ಗ್ರಾಮದ ರೈತ ಮುಖಂಡ ಮಲ್ಲನಗೌಟ ಪಾಟೀಲ, ಶಂಕರಗೌಡ ಜುಮನಾಳ, ಶಿವಾನಂದ ಸಾಲಿಮಠ,ಮಂಜು ಮನೂರ ಸೇರಿದಂತೆ ಅನೇಕರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST