LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೈಲಿನಲ್ಲಿ ನಟ ದರ್ಶನಗೆ ವಿಶೇಷ ಸೌಲಭ್ಯ ಸಿಗ್ತಿದೇನಾ..?

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೊಲೆ(Murder) ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ವಿಶೇಷ ಸೌಲಭ್ಯ ಸಿಗುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಯಾಕಂದರೆ, ಇದೀಗ ಒಂದು ಫೋಟೋ ವೈರಲ್ ಆಗಿದೆ. ಅದರಲ್ಲಿ ನಟ ದರ್ಶನ್, ದರ್ಶನ್(Actor Darshan) ಮ್ಯಾನೇಜರ್ ನಾಗರಾಜ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಸೇರಿದಂತೆ ಇನ್ನೊಬ್ಬ ವ್ಯಕ್ತಿಯ ಜೊತೆಗೆ ಕುರ್ಚಿಯಲ್ಲಿ ಕುಳಿತುಕೊಂಡು, ಕೈಯಲ್ಲಿ ಕಾಫಿ ಕಪ್, ಸಿಗರೇಟ್ ಹಿಡಿದುಕೊಂಡಿರುವ ಫೋಟೋ ವೈರಲ್ ಆಗಿದೆ. ಅಲ್ಲಿನ ಇನ್ನೊಬ್ಬ ಕೈದಿ ಫೋಟೋ ತೆಗೆದು ತನ್ನ ಹೆಂಡ್ತಿಗೆ ಕಳಿಸಿದ್ದ ಎನ್ನುವ ಮಾತುಗಳು ಕೇಳಿ ಬಂದಿದ್ದು, ಇದರ ಹಿಂದಿನ ಅಸಲಿ ಕಹಾನಿ ತಿಳಿದು ಬರಬೇಕಿದೆ.

ಕಳೆದ 65 ದಿನಗಳಿಂದ ನಟ ದರ್ಶನ್ ಸೇರಿ ಇತರೆ ವಿಚರಣಾಧೀನ ಕೈದಿಗಳು ಜೈಲಿನಲ್ಲಿದ್ದಾರೆ. ಆಗಸ್ಟ್ 28ರ ತನಕ ಈ ತಂಡ ನ್ಯಾಯಾಂಗ ಬಂಧನದಲ್ಲಿ. ಈಗ ವೈರಲ್ ಆಗಿರುವ ಫೋಟೋ ಹಿಂದಿನ ಸತ್ಯಾಸತ್ಯತೆ ಬಗ್ಗೆ ತಿಳಿದು ಬರಬೇಕಿದೆ. ಇದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ನಟ ದರ್ಶನ್ ಅವರು ಆರೋಪಿ. ಅಪರಾಧಿಯಲ್ಲ. ಅವರು ನ್ಯಾಯಾಂಗ ಬಂಧನದಲ್ಲಿದ್ದು, ಕೆಲವು ಸೌಲಭ್ಯಗಳು ಇರಬಹುದು ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST