ಪ್ರಜಾಸ್ತ್ರ ಸುದ್ದಿ
ಜೇವರ್ಗಿ(Jevargi): ಅಪಾರ ಪ್ರಮಾಣದ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಹಾಳಾಗಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಲ್ಲೂರ.ಬಿ ಗ್ರಾಮದಲ್ಲಿ ನಡೆದಿದೆ. ರೈತ ಶಿವಶರಣಪ್ಪ ಸಿದ್ದಪ್ಪ ಬಳೂಂಡಗಿ ಎಂಬುವರ ಹೊಲದಲ್ಲಿ ಬೆಳೆದ ಕಬ್ಬು ಹಾನಿಯಾಗಿದೆ. ವಿದ್ಯುತ್ ಕಂಬ್ ಗಳು ಮುರಿದ ಬಿದ್ದಿವೆ.
ಈ ಕುರಿತು ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಆಗಿರುವ ಬೆಳೆ ಹಾನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಶಿವಶರಣಪ್ಪ ಆಗ್ರಹಿಸಿದ್ದಾರೆ. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ರೈತರೆಲ್ಲರೂ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.



