LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಭೂ ಒಡೆತನ ಯೋಜನೆಗೆ ಅಧಿಕಾರಿಗಳಿಂದ ಕನ್ನ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡುವ ಭೂ ಒಡೆತನ ಯೋಜನೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಭೂ ರಹಿತ ಮಹಿಳಾ ಕೃಷಿ ಫಾಲನುಭವಿಗಳ ಹೆಸರಲ್ಲಿ ನಕಲಿ ಖರೀದಿ ದಾಖಲೆ ಪತ್ರ ಸೃಷ್ಟಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಾಸ್ತ್ರಿ ಸಂಗಪ್ಪ ಹೊಸಮನಿ ಎಂಬುವರು ನೀಡಿದ ದೂರಿನ ಮೇಲೆ ಐವರು ಅಧಿಕಾರಿಗಳ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ನಿಗಮದ ಹೆಸರಿಗೆ ಭೋಜಾ ಮಾಡಿಸದೆ ಜಮೀನು ಖರೀದಿ ಮಾಡಿ ಮಹಿಳೆಯರಿಗೆ ಕಬ್ಜಾ ಕೊಡದೆ ಸರ್ಕಾರದ ಸುತ್ತೋಲೆಯ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರದ ಹಣ ದುರುಪಯೋಗ ಮಾಡಿರುವ ಕುರಿತು ದೂರು ನೀಡಲಾಗಿತ್ತು. ಈ ಕುರಿತು ನ್ಯಾಯಾಲಯದ ವಾರೆಂಟ್ ಪಡೆದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹಿಂದಿನ ಜಿಲ್ಲಾ ವ್ಯವಸ್ಥಾಪಕರಾದ ರೇಣುಕಾ ಸಾತರ್ಲೆ, ಎಸ್.ಜಿ ಹಡಪದ(ನಿವೃತ್ತ) ಹಿಂದಿನ ಜಿಲ್ಲಾ ವ್ಯವಸ್ಥಾಪಕರು, ಎಸ್.ಎಸ್ ಮಣ್ಣಿಗೇರಿ ನಿಗಮದ ಹಿಂದಿನ ತಾಲೂಕು ಅಭಿವೃದ್ಧಿ ಅಧಿಕಾರಿ, ವ್ಯವಸ್ಥಾಪಕ ನಿರ್ದೇಶಕರು ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬೆಂಗಳೂರು ಹಾಗೂ ಜಿಲ್ಲಾ ವ್ಯವಸ್ಥಾಪಕರು ಕಚೇರಿಗಳ ಮೇಲೆ ಡಿಎಸ್ ಪಿ ಹಾಗೂ ಐವರು ಪೊಲೀಸರು ನಿರೀಕ್ಷಕರ ತಂಡ ರಚಿಸಿ ದಾಳಿ ಮಾಡಲಾಗಿದೆ. ಈ ವೇಳೆ ನಕಲಿ ದಾಖಲೆ ಪತ್ರಗಳು, ನಕಲಿ ನೋಂದಣಾಧಿಕಾರಿಗಳ ಚಲನ್ ಗಳು ಸೃಷ್ಟಿಸಿರುವುದು ಹಾಗೂ ಹಲವು ಕೋಟಿಗಳ ಹಣದ ವ್ಯವಹಾರ ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST